Categories
ಮಂಗಳೂರು

2017ರಲ್ಲಿ ಆರಂಭವಾದ ಕಲ್ಲಡ್ಕ ಫ್ಲೈ ಓವರ್ ಸಂಚಾರಕ್ಕೆ ಮುಕ್ತ!

2017ರಲ್ಲಿ ಆರಂಭವಾದ ಕಲ್ಲಡ್ಕ ಫ್ಲೈ ಓವರ್ ಸಂಚಾರಕ್ಕೆ ಮುಕ್ತ!

* ಕೊನೆಗೂ ಕಲ್ಲಡ್ಕ ಫ್ಲೈ ಓವರಿನಲ್ಲಿ ವಾಹನ ಸಂಚಾರ
* ಕುಂಟುತ್ತಾ ಸಾಗಿದ ಫ್ಲೈ ಓವರ್ ಕಾಮಗಾರಿ ಇದೀಗ ಪೂರ್ಣ

NAMMUR EXPRESS NEWS
ಮಂಗಳೂರು: ಕಳೆದ ಸುಮಾರು ಎಂಟು ವರ್ಷಗಳಿಂದ ನಡೆದ ಕಾಮಗಾರಿಯ ಬಳಿಕ ಕಲ್ಲಡ್ಕ ಫ್ಲೈ ಓವರ್ ಸೋಮವಾರ ಜೂ.2ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿದೆ.
ಮಾಣಿ (ಬೆಂಗಳೂರು)ಯಿಂದ ಬಿ.ಸಿ.ರೋಡ್ (ಮಂಗಳೂರು)ಗೆ ಆಗಮಿಸುವ ಫ್ಲೈ ಓವರ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) ಅನೂವು ಮಾಡಿದೆ.
ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಬಿ.ರೋಡ್ ನಿಂದ ಅಡ್ಡಹೊಳೆವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಯ ಭಾಗವಾಗಿ 2017ರಲ್ಲಿ ಆರಂಭಗೊಂಡಿತ್ತು. ಹಲವು ಕಾರಣಗಳಿಂದ ವಿಳಂಬಗೊಂಡು ಕುಂಟುತ್ತಾ ಸಾಗಿದ ಫ್ಲೈ ಓವರ್ ಕಾಮಗಾರಿ ಇದೀಗ ಪೂರ್ಣಗೊಂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.