ಭಾರತದ ಸುರಕ್ಷಿತ ನಗರ ಪಟ್ಟಿಯಲ್ಲಿ ಮಂಗಳೂರು!
– ಕರಾವಳಿಯ ಕುಡ್ಲಕ್ಕೆ ಮತ್ತೊಂದು ಹಿರಿಮೆಯ ಗರಿ
– ದೇಶದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ 49ನೇ ಸ್ಥಾನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಜಾಗತಿಕ ಡಾಟಾಬೇಸ್ ಆಗಿರುವ ನಂಬಿಯೋ 2025ರ ವರ್ಷದ ಮಧ್ಯ ಭಾಗದ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಸುರಕ್ಷಿತ ನಗರಗಳ ವಿಭಾಗದಲ್ಲಿ ಜಗತ್ತಿನ ಒಟ್ಟು 393 ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ 23 ನಗರಗಳ ಹೆಸರುಗಳು ದಾಖಲಾಗಿವೆ. ಇದರಲ್ಲಿ ಮಂಗಳೂರು ಶೇಕಡ 74.2 ಅಂಕಗಳನ್ನು ಹೊಂದಿ, 49ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ, ಅಗ್ರಸ್ಥಾನದಲ್ಲಿದೆ. ಇದರಿಂದ ಕರ್ನಾಟಕಕ್ಕೆ ಮತ್ತೊಂದು ಗರಿಮೆ ಮೂಡಿದಂತಾಗಿದೆ. ಇನ್ನುಳಿದಂತೆ ವಡೋದರ 85ನೇ ಸ್ಥಾನವನ್ನು, ಅಹಮದಾಬಾದ್ 93ನೇ ಸ್ಥಾನವನ್ನು ಪಡೆದುಕೊಂಡಿವೆ. ಇನ್ನು ಜಾಗತಿಕ ಮಟ್ಟದಲ್ಲಿ 88.8 ಅಂಕವನ್ನು ಪಡೆಯುವ ಮುಖಾಂತರ ಅಬುದಾಬಿ ಮೊದಲ ಸ್ಥಾನ, 84.3 ಅಂಕಗಳೊಂದಿಗೆ ದೋಹ ಎರಡನೇ ಸ್ಥಾನ, 83.9 ಅಂಕಗಳೊಂದಿಗೆ ದುಬೈ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
