ಟಾಪ್ 3 ನ್ಯೂಸ್ ತೀರ್ಥಹಳ್ಳಿ
ತೀರ್ಥಹಳ್ಳಿ :ಪ್ರೈವೇಟ್ ಫೈನಾನ್ಸ್ ಕಿರುಕುಳ,ಸಾಲಭಾದೆಯಿಂದ ಆತ್ಮಹತ್ಯೆ ಗೆ ಶರಣಾದ ವ್ಯಕ್ತಿ..!!
– ತೀರ್ಥಹಳ್ಳಿ : ಆ. 9ಕ್ಕೆ 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ “ತಿರಂಗ ಯಾತ್ರೆ ಬೈಕ್ ರ್ಯಾಲೀ”
– ತೀರ್ಥಹಳ್ಳಿ : ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್ ಹಾಗೂ ವಿವಿಧ ಪರಿಕರ ವಿತರಣೆ
NAMMUR EXPRESS NEWS
ತೀರ್ಥಹಳ್ಳಿ : ತಾಲೂಕಿನ ಕುರುವಳ್ಳಿಯ ಲಾರಿ ಮಾಲೀಕರೊಬ್ಬರು ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ ಹೆಚ್.(ಟಿಪ್ಪರ್ ಮಂಜು.) (37)ಮೃತ ದುರ್ದೈವಿ ಖಾಸಗಿ ಫೈನನ್ಸ್ ನಲ್ಲಿ ಸಾಲ ಹಾಗೂ ಸಂಘ ಸಂಸ್ಥೆ ಗಳಲ್ಲಿ ಹಾಗೂ ಇನ್ನಿತರ ಪ್ರೈವೇಟ್ ಫೈನಾನ್ಸ್ ಕಿರುಕುಳದಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
– ತೀರ್ಥಹಳ್ಳಿ : ಆ. 9ಕ್ಕೆ 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ “ತಿರಂಗ ಯಾತ್ರೆ ಬೈಕ್ ರ್ಯಾಲೀ”
ತೀರ್ಥಹಳ್ಳಿ : ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹಾದೇವ ಯಶಸ್ಸಿಗಾಗಿ ವೀರ ಯೋಧರಿಗೆ ನಮನ ಹಾಗೂ 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ “ತಿರಂಗ ಯಾತ್ರೆ ಬೈಕ್ ರ್ಯಾಲೀ” ಯನ್ನು ದಿನಾಂಕ : 9/08/2025 ಶನಿವಾರದಂದು ಸಂಜೆ 4:30ಕ್ಕೆ ಸರಿಯಾಗಿ ಕುಶಾವತಿ ಪಾರ್ಕ್ ಯಿಂದ ಹೊರಟು ಎ.ಪಿ.ಎಂ.ಸಿ ಯಾರ್ಡ್ ತನಕ ನಡೆಯಲಿದೆ . ಎಲ್ಲಾ ಯುವಮೋರ್ಚಾ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು, ದೇಶಭಕ್ತ ಬಂಧುಗಳು ಹಾಗೂ ನಾಗರಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ಯುವಮೋರ್ಚಾ, ತೀರ್ಥಹಳ್ಳಿ ಮಂಡಲ ಕೋರಿದೆ.
– ತೀರ್ಥಹಳ್ಳಿ : ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್ ಹಾಗೂ ವಿವಿಧ ಪರಿಕರ ವಿತರಣೆ
ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲ ಚೇತನ ಫಲಾನುಭವಿಗಳಿಗೆ 4 ತ್ರಿಚಕ್ರ ಸ್ಕೂಟರ್ಗಳು 1 ಬ್ಯಾಟರಿ ಚಾಲಿತ ವೀಲ್ ಚೇರ್ 1 ಲ್ಯಾಪ್ ಟಾಪ್ ಹಾಗೂ ವಾಕಿಂಗ್ ಸ್ಟಿಕ್, ಶ್ರವಣ ಸಾಧನಗಳನ್ನು ಶಾಸಕ ಆರಗ ಜ್ಞಾನೇಂದ್ರರು ಗ್ರಾಮೀಣಾಭಿವೃದ್ಧಿ ಭವನದಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ವಿಕಲ ಚೇತನ ಇಲಾಖೆಯ ಸಂಧ್ಯಾ ನಾಯಕ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ತಾಲೂಕು ಪಂಚಾಯ್ತಿಯ ರಾಘವೇಂದ್ರ, ವಿಕಲ ಚೇತನ ಇಲಾಖೆಯ ಸಂಯೋಜಕ ದಿವಾಕರ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
