Categories
ಮಂಗಳೂರು

ಮಂಗಳೂರಲ್ಲಿ ‘ಜನಿವಾರ’ ಘಟನೆ ವಿರೋಧಿಸಿ ಪ್ರತಿಭಟನೆ, ಬ್ರಾಹ್ಮಣರ ಆಕ್ರೋಶ!!

ಮಂಗಳೂರಲ್ಲಿ ‘ಜನಿವಾರ’ ಘಟನೆ ವಿರೋಧಿಸಿ ಪ್ರತಿಭಟನೆ, ಬ್ರಾಹ್ಮಣರ ಆಕ್ರೋಶ!!

– ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಖಂಡಿಸಿ ಪ್ರತಿಭಟನೆ
– ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಸೇರಿದ ಬ್ರಾಹ್ಮಣರ ಹಿಂಡು!

NAMMUR EXPRESS NEWS
ಮಂಗಳೂರು: ಬೀದರ್‌ನಲ್ಲಿ ಸಿಇಟಿ ಬರೆಯಲು ತೆರಳಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾದ ವತಿಯಿಂದ ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ
ಏ. 22ರಂದು ಬ್ರಾಹ್ಮಣರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಜನಿವಾರ ಎಂಬುದು ಕೇವಲ ನೂಲಲ್ಲ; ಅದು ಬ್ರಾಹ್ಮಣರ ಅಸ್ಮಿತೆ, ಅಸ್ತಿತ್ವ, ಸಂಸ್ಕಾರ. ನಮ್ಮ ಸಮಾಜಕ್ಕೆ ಧಕ್ಕೆ ಬಂದರೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗಿದರು.
ರಾಜ್ಯದ ಹಲವು ಸಿಇಟಿ ಕೇಂದ್ರದಲ್ಲಿ ಬ್ರಾಹ್ಮಣ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ ಘಟನೆ ಖಂಡನೀಯ. ಇದೊಂದು ಅಕ್ಷಮ್ಯ ಅಪರಾಧ, ಅಸಂಖ್ಯಾತ ಜನಿವಾರಧಾರಿಗಳ ಧರ್ಮ, ನಂಬಿಕೆ ಮತ್ತು ಸಂಸ್ಕಾರಗಳಿಗೆ ಮಾಡಿದ ಅಪಮಾನ. ಧರ್ಮಾದಾರಿತ ಮೀಸಲಾತಿ ನೀಡುತ್ತಿರುವ ಸರ್ಕಾರ ಧರ್ಮಾರಿತ ನಂಬಿಕೆ, ಸಂಪ್ರದಾಯ, ಸಂಸ್ಕಾರಗಳನ್ನು ಗೌರವಿಸಬೇಕಿದೆ ಎಂದು ಬ್ರಾಹ್ಮಣರು ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.