Categories
ಕೊಪ್ಪ ತೀರ್ಥಹಳ್ಳಿ ಶಿವಮೊಗ್ಗ

ಉಗ್ರರ ದಾಳಿಗೆ ಹತರಾದ ಮಂಜುನಾಥ್ ಓದಿದ್ದು ತೀರ್ಥಹಳ್ಳಿ, ಊರು ಕೊಪ್ಪ!

ಉಗ್ರರ ದಾಳಿಗೆ ಹತರಾದ ಮಂಜುನಾಥ್ ಓದಿದ್ದು ತೀರ್ಥಹಳ್ಳಿ, ಊರು ಕೊಪ್ಪ!
– ತಾಯಿ ಅನಾರೋಗ್ಯದ ಹಿನ್ನೆಲೆ, ಮಗನ ಸಾವಿನ ವಿಚಾರ ತಿಳಿಸದ ಕುಟುಂಬಸ್ಥರು
– ಶಿವಮೊಗ್ಗದಲ್ಲಿ ನೀರವ ಮೌನ: ಗಣ್ಯರ ಭೇಟಿ, ಕುಟುಂಬಕ್ಕೆ ಸಾಂತ್ವನ

NAMMUR EXPRESS NEWS
ತೀರ್ಥಹಳ್ಳಿ / ಶಿವಮೊಗ್ಗ / ಕೊಪ್ಪ: ಜಮ್ಮು ಕಾಶ್ಮೀರದ ಪೆಹಲ್ಲಾಂನಲ್ಲಿ ನಡೆದ ಉಗ್ರರ ದಾಳಿಯಿಂದ ಹತರಾದ ಮಂಜುನಾಥ್ ತೀರ್ಥಹಳ್ಳಿಯಲ್ಲಿ ಓದಿದ್ದು ಕೊಪ್ಪ ಮೂಲದವರಾಗಿದ್ದಾರೆ.
ಮಂಜುನಾಥ್ ಅವರ ತಂದೆ ತೀರ್ಥಹಳ್ಳಿಯ ಮ್ಯಾಮ್ ಕೋಸ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು ಹಾಗೂ ಮಗನಾದ ಮಂಜುನಾಥ್ ಅವರು ಶಿಕ್ಷಣಕ್ಕಾಗಿ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಅವರ ಸ್ನೇಹಿತರು, ಪರಿಚಯಸ್ಥರು ಇದೀಗ ಕಂಬನಿ ಮಿಡಿಯುತ್ತಿದ್ದಾರೆ.
ಮೂಲತಃ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದ ಮಂಜುನಾಥ್ ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಪ್ರಾರಂಭಿಸಿ ಯಶಸ್ವಿ ಆಗಿದ್ದರು.

ತಾಯಿಗೆ ವಿಚಾರ ಗೊತ್ತೇ ಇಲ್ಲ!

ಮಂಜುನಾಥ್‌ ಅವರು ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ತೊಡಗಿದ್ದರು. ರಿಯಲ್ ಎಸ್ಟೇಟ್ ವೃತ್ತಿಯಿಂದ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಪತ್ನಿ, ತಾಯಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಕಳೆದ ನಾಲೈದು ದಿನದ ಹಿಂದಷ್ಟೇ ಹೆಂಡತಿ ಪಲ್ಲವಿ ಜೊತೆಗೆ ಜಮ್ಮುಕಾಶ್ಮೀರಕ್ಕೆ ತೆರಳಿದ್ದರು.
ಜಮ್ಮುಕಾಶ್ಮೀರಕ್ಕೆ ಹೆಂಡತಿಯ ಜೊತೆ ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ಅವರು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಆದರೆ ಶಿವಮೊಗ್ಗದ ನಿವಾಸದಲ್ಲಿರುವ ಮಂಜುನಾಥ್ ಅವರ ತಾಯಿ ಸುಮತಿಗೆ ಈ ವಿಚಾರದ ಅರಿವಿಲ್ಲ.
ತಾಯಿ ಅನಾರೋಗ್ಯ ಹಿನ್ನೆಲೆಯಲ್ಲಿ ಮಗನ ಸಾವಿನ ಕುರಿತು ಅವರಿಗೆ ಇದುವರೆಗೂ ಮಾಹಿತಿ ನೀಡಿಲ್ಲದ್ದರಿಂದ ತಾಯಿ ತನ್ನ ಮಗನ ಬರುವಿಕೆಗಾಗಿ ಹಾತೊರೆಯುತ್ತಿದೆ.

ಮಂಜುನಾಥ್ ರಾವ್ ಮನೆಗೆ ಗಣ್ಯರ ಭೇಟಿ, ಸಾಂತ್ವನ

ಕಾಶ್ಮೀರದ ಪಹಲ್ಗಾಮ್ ಉಗ್ರರ ಧಾಳಿಯಲ್ಲಿ ಹತರಾದ ಮಂಜುನಾಥ ರಾವ್ (47) ಅವರ ಶಿವಮೊಗ್ಗ ನಿವಾಸಕ್ಕೆ ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ, ಶಾಸಕರಾದ ಚೆನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮೃತರು ತೀರ್ಥಹಳ್ಳಿ ತುಂಗಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು ಮೃತ ಮಂಜುನಾಥ್ ರಾವ್ ಅವರ ತಂದೆ ಮಹಾಬಾಲ ರಾವ್ ತೀರ್ಥಹಳ್ಳಿಯ ಮ್ಯಾಮ್ಕೋಸ್ ನ ಉದ್ಯೋಗಿಯಾಗಿದ್ದರು…ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ದುಃಖ ತಪ್ತ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ಕಂಬನಿ ಮಿಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.