ಕರಾವಳಿ ಟಾಪ್ ನ್ಯೂಸ್
ಪುತ್ತೂರು: ಕೆರೆಯಲ್ಲಿ ಯುವಕನ ಶವ ಪತ್ತೆ!
– ಕೋಟದಲ್ಲಿ ಚಿನ್ನ ಕಳ್ಳತನ ಪ್ರಕರಣ!
– ಉಡುಪಿ: ಲಂಚ ಸ್ವೀಕರಿಸುತ್ತಿದ್ದ ಆರೋಪ, ಸಹಾಯಕ ಸರಕಾರಿ ಅಭಿಯೋಜಕ ಅರೆಸ್ಟ್
NAMMUR EXPRESS NEWS
ಪುತ್ತೂರು: ಯುವಕನೋರ್ವನ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಪುತ್ತೂರಿನ ರಾಗಿದಕುಮೇರು ಸಮೀಪದ ಅಂದ್ರಟ್ಟದ ಮರಕ್ಕೂರು ಎಂಬಲ್ಲಿ ನಡೆದಿದೆ.
ಮರಕ್ಕೂರ್ ನಿವಾಸಿ ಕಿರಣ್ ನಾಯ್ಕ್ (29) ಎಂಬವರ ಶವ ಪತ್ತೆಯಾಗಿದೆ.
ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ,ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
– ಕೋಟದಲ್ಲಿ ಚಿನ್ನ ಕಳ್ಳತನ ಪ್ರಕರಣ!
ಕೋಟ: ಕೋಟ ಪೊಲೀಸ್ ಠಾಣಾ ಆರೋಪಿಯನ್ನು ಪೊಲೀಸರು ಟೆಕ್ಕಟ್ಟೆ ಬಳಿ ಮಾ. 26ರಂದು ಬಂಧಿಸಿದ್ದಾರೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಮಣೂರು ನಿವಾಸಿ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 25 ಗ್ರಾಂ ತೂಕದ ಸುಮಾರು ರೂ. 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಕೋಟ ಠಾಣೆಯ ಸಬ್‌ಇನ್ಸ್ ಪೆಕ್ಟರ್ ರಾಘವೇಂದ್ರ ಸಿ ಮತ್ತು ಸುಧಾಪ್ರಭು, ಎ.ಎಸ್. ಐ ಜಯಪ್ರಕಾಶ್, ಹೆಡ್ ಕಾನ್ಸಟೇಬಲ್ ರೇವತಿ, ಕೃಷ್ಣ, ಶ್ರೀಧರ್, ಕಾನ್ಸಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ಇದ್ದರು.
– ಉಡುಪಿ: ಲಂಚ ಸ್ವೀಕರಿಸುತ್ತಿದ್ದ ಆರೋಪ, ಸಹಾಯಕ ಸರಕಾರಿ ಅಭಿಯೋಜಕ ಅರೆಸ್ಟ್
ಉಡುಪಿ: ನಗರದ ಕೋರ್ಟ್ ಆವರಣದಲ್ಲಿರುವ ತನ್ನ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ವಿ. ನಾಯ್ಕನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಮಾ. 26ರಂದು ಬಂಧಿಸಿದ್ದಾರೆ.
ಮರಳು ಸಾಗಾಟ ವಾಹನದ ಬಿಡುಗಡೆ ಸಂಬಂಧ 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಗಣಪತಿ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಪ್ರಭಾರ ಡಿವೈಎಸ್.ಪಿ. ಮಂಜುನಾಥ್, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್., ಎಎಸ್ಐ ನಾಗೇಶ್ ಉಡುಪ, ಸಿಬ್ಬಂದಿಗಳಾದ ನಾಗರಾಜ್, ಸತೀಶ್ ಹಂದಾಡಿ, ರೋಹಿತ್, ಮಲ್ಲಿಕಾ, ಪುಷ್ಪಾವತಿ, ರವೀಂದ್ರ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ, ರಾಘವೇಂದ್ರ ಹೊಸಕೋಟೆ, ಸುಧೀರ್, ಸತೀಶ್ ಆಚಾರ್ಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.