Categories
ಮಂಗಳೂರು

ಸುಹಾಸ್ ಶೆಟ್ಟಿ ಕೊಲೆ: ತೀವ್ರ ತನಿಖೆ..!

ಸುಹಾಸ್ ಶೆಟ್ಟಿ ಕೊಲೆ: ತೀವ್ರ ತನಿಖೆ..!

* ಕೇಂದ್ರ ಗೃಹ ಇಲಾಖೆಯಿಂದ ಆದೇಶ

NAMMUR EXPRESS NEWS
ಮಂಗಳೂರು: ಇತ್ತೀಚಿಗೆ ಮಂಗಳೂರಿನ ಬಜ್ಪೆಯಲ್ಲಿ ಕೋಮುಗಲಭೇಯಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಸಾವಿನ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳವು ಮಂಗಳೂರಿಗೆ ಆಗಮಿಸಿದೆ. ಈ ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒತ್ತಡ ಹೇರಿದ್ದರ ಪರಿಣಾಮವಾಗಿ ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಿಖಾ ದಳಕ್ಕೆ ಕಳೆದೆರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ರಾಷ್ಟ್ರೀಯ ತನಿಖಾ ದಳ ಬೆಂಗಳೂರು ಘಟಕದ ಅಧಿಕಾರಿಗಳು ಮಂಗಳೂರನ್ನು ಪ್ರವೇಶಿಸಿದ್ದು, ಅನುಮಾನ ಬಂದ ವಿಚಾರಗಳ ಕುರಿತು ಒಂದಂಶವನ್ನೂ ಕಡೆಗಣಿಸದೆ, ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಸಂಗತಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.