Categories
ಮಂಗಳೂರು

ತುಳುವಿನ ಬಿಗ್ ಬಜೆಟ್ ಸಿನಿಮಾ ಜೈ ತುಳು..!

ತುಳುವಿನ ಬಿಗ್ ಬಜೆಟ್ ಸಿನಿಮಾ ಜೈ ತುಳು..!
– ರೂಪೇಶ್ ಶೆಟ್ಟಿ ಹೀರೋ…ಅದ್ವಿತಿ ಶೆಟ್ಟಿ ಹೀರೋಯಿನ್
– ನವೆಂಬರ್ 14ರಂದು ಚಿತ್ರ ಬಿಡುಗಡೆಗೆ ಸಜ್ಜು

NAMMUR EXPRESS NEWS
ಮಂಗಳೂರು: ಮಂಗಳೂರು ಮೂಲದ ರೂಪೇಶ್ ಶೆಟ್ಟಿ ಅವರು ಜೈ ತುಳು ಎಂಬ ಚಿತ್ರವೊಂದನ್ನು ನಿರ್ದೇಶಿಸಿದ್ದು, ಚಿತ್ರದ ನಾಯಕ ಕೂಡ ಅವರೇ ಆಗಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಇದು ತುಳುವಿನ ಬಿಗ್ ಬಜೆಟ್ ಚಿತ್ರವಾಗಿದ್ದು, ಬೆಂಗಳೂರಿನಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ನವೆಂಬರ್ 14ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ದಿನಾಂಕವನ್ನು ಘೋಷಿಸಿದರು. ಈಗಾಗಲೇ ಗಿರಿಗಿಟ್, ಗಮ್ಜಾಲ್ ಮತ್ತು ಸರ್ಕಸ್ ಚಿತ್ರಗಳ ಮೂಲಕ ಯಶಸ್ವಿಯಾಗಿರುವ ರೂಪೇಶ್ ಶೆಟ್ಟಿ ಅವರು ಜೈ ತುಳು ಎಂಬ ದೊಡ್ಡ ಮೊತ್ತದ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಈ ಚಿತ್ರವು ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್ ಮತ್ತು ಮುಗ್ರೋಡ್ ನಿರ್ಮಾಣ ಲಾಂಛನದಡಿಯಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಅವರ ನಿರ್ಮಾಣ ಮತ್ತು ದೀಕ್ಷಿತ್ ಆಳ್ವ ಅವರ ಸಹ ನಿರ್ಮಾಣದಲ್ಲಿ ತಯಾರಾಗುತ್ತಿದೆ.

ಚಿತ್ರತಂಡದಲ್ಲಿ ಯಾರು ಯಾರಿದ್ದಾರೆ..?

ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರು ಈ ಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೂಪೇಶ್ ಶೆಟ್ಟಿ ಅವರು ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಅವರು ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಲೊಯ್ ವೆಲೆಂಟಿನ್ ಸಲ್ದಾನ್ ಅವರ ಸಂಗೀತ, ವಿನುತ್ ಕೆ ಅವರ ಛಾಯಾಗ್ರಹಣ, ರಾಹುಲ್ ವಸಿಷ್ಠ ಅವರ ಸಂಕಲನ ಈ ಚಿತ್ರಕ್ಕಿದೆ. ನವೀನ್ ಶೆಟ್ಟಿ ಆರ್ಯನ್ಸ್ ಅವರು ಜೈ ತುಳು ಚಿತ್ರಕ್ಕೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಹಾಗೂ ನೃತ್ಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುನಿಲ್ ಶೆಟ್ಟಿ, ಡಾ. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ತಾರಾಗಣದಲ್ಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.