ಅಕ್ರಮ ಪಹಣಿ ವಿರುದ್ಧ ಸಿಡಿದೆದ್ದ ಜನ!
– ಬೆಜ್ಜವಳ್ಳಿ: ದಬ್ಬಣಗದ್ದೆ ಗ್ರಾಮದಲ್ಲಿ ಖಾತೆ ಪಹಣಿ ಮಾಡೋದು ಬೇಡ: ಜಿಲ್ಲಾ ಆಡಳಿತಕ್ಕೆ ಮನವಿ
– ಬೆಜ್ಜವಳ್ಳಿ: ವಳಗೇರಿ ರಸ್ತೆ ಅವ್ಯವಸ್ಥೆ: ಜನರ ಪರದಾಟ!
– ಗಡಿಕಲ್: ಕರೆಂಟ್ ಲೈನ್ ತುಳಿದು ಹಸು ಸಾವು!
ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮ ಪಂಚಾಯತ್ ದಬ್ಬಣಗದ್ದೆ ಗ್ರಾಮದ 83ರ ಜಮೀನನ್ನು ಬೇರೆಯವರ ಹೆಸರಿಗೆ ಖಾತೆ ಪಹಣಿ ಮಾಡಿ ಕೊಡಬಾರದು ಎಂದು ಅಗ್ರಹಿಸಿ ದಬ್ಬಣಗದ್ದೆ ಗ್ರಾಮಸ್ಥರು ಹಾಗೂ ಹೋರಾಟಗಾರರು ಉಪ ವಿಭಾಗ ಅಧಿಕಾರಿಗೆ ಮನವಿ ನೀಡಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು, ಮುತ್ತೂರು ಹೋಬಳಿ, ದಬ್ಬಣಗದ್ದೆ ಗ್ರಾಮದ ಸ.ನಂ. 83 ರಲ್ಲಿ ಒಟ್ಟು 220 ಎಕರೆ 33 ಗುಂಟೆ ಇದ್ದು, ಇದರಲ್ಲಿ ಮೈನರ್ ಫಾರೆಸ್ಟ್ ಮತ್ತು ದನಕ್ಕೆ ಮುಫತ್ತು ಭೂಮಿಯಾಗಿರುತ್ತದೆ. ದನಕ್ಕೆ ಮುವತ್ತು ಭೂಮಿಯಲ್ಲಿ ಹಲವಾರು ಗ್ರಾಮಸ್ಥರು ಪೂರ್ವಿಕರ ಕಾಲದಿಂದಲೂ ವಾಸದ ಮನೆಗಳನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ವಾಸದ ಮನೆ, ಮನೆಗೆ ಹೊಂದಿಕೊಂಡು ಕೊಟ್ಟಿಗೆ, ಗೊಬ್ಬರ ಗುಂಡಿ, ಒಕ್ಕುವ ಕಣ ಹಿತ್ತಲು ಇತ್ಯಾದಿಗಳನ್ನು ಮಾಡಿಕೊಂಡಿರುತ್ತಾರೆ. ಹಲವಾರು ಜನರು ಸ.ನಂ. 83 ರಲ್ಲಿ ಬಗರ್ ಹುಕುಂಸಾಗುವಳಿ ಮಾಡಿಕೊಂಡು ಬಂದಿದ್ದು, ಬಗರ್ ಹುಕುಂ ಸಕ್ರಮೀಕರಣ ಕಾಯಿದೆಯನ್ವಯ ಮಂಜೂರಾಗಿ ಮ್ಯುಟೇಷನ್, ಖಾತೆ ಪಹಣೆ ದಾಖಲಾಗಿದ್ದು, ಅವರವರ ಸಾಗುವಳಿಯಲ್ಲಿರುತ್ತದೆ. ಈ ಭೂಮಿಯಲ್ಲಿ ಮುಖ್ಯ ಟಾರ್ ರಸ್ತೆಗಳು, ಗಾಡಿ ದಾರಿಗಳು, ಕಾಲು ದಾರಿಗಳು ಇರುತ್ತವೆ. ವಾಸದ ಮನೆಗಳು, ಸಾಗುವಳಿ ಜಮೀನುಗಳು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ದಟ್ಟವಾದ ನೈಸರ್ಗಿಕ ಕಾಡು ಇರುತ್ತೆದೆ. ಉಳಿದ ಜಾಗ ಜಾನುವಾರು ಮೇವು, ರೈತಾಪಿ ಕಸುಬಿಗೆ ಪೂರಕವಾದ ಸೊಪ್ಪು, ದರಗು ಇತ್ಯಾದಿಗಳಿಗೆ ಉಪಯೋಗಿಸಿಕೊಂಡು ಬರಲಾಗುತ್ತಿದೆ.
ಆದರೆ ಈಗ ಖಾಸಗಿ ವ್ಯಕ್ತಿ ಒಬ್ಬರು ನೂರಾರು ವರ್ಷದ ತಮ್ಮ ಹಿಂದಿನ ತಲೆಮಾರನ್ನು ಮುಂದಿಟ್ಟುಕೊಂಡು ದಬ್ಬಣಗದ್ದೆ ಗ್ರಾಮದ ಸ.ನಂ. 17. 83 ಮತ್ತು 84 ರಲ್ಲಿ ಸರ್ಕಾರಿ ಎಂದು ನಮೂದಾಗಿರುವ ಜಮೀನುಗಳನ್ನು ತಮ್ಮ ಹೆಸರಿಗೆ ಖಾತೆ ಪಹಣಿ ಸ್ಥಾಪಿಸಿಕೊಡಲು ಅರ್ಜಿ ಸಲ್ಲಿಸಿ ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ನೂರಾರು ವರ್ಷಗಳಿಂದ ಸರ್ಕಾರಿ ಭೂಮಿಯಾಗಿರುವುದನ್ನು ಖಾಸಗಿಯವರು ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಇದರಲ್ಲಿ ತಮ್ಮ ಹಕ್ಕುದಾರಿಕೆ ಇದೆ ಎಂದು ಈಗ ತಮ್ಮ ಹೆಸರಿಗೆ ಹಕ್ಕುದಾಖಲೆ ಮಾಡಿಕೊಳ್ಳುವುದಕ್ಕೆ ನಮ್ಮ ತಕರಾರು ಹಾಗೂ ಆಕ್ಷೇಪಣೆ ಇರುವುದನ್ನು ತಮ್ಮ ಅವಗಾಹನೆಗೆ ತರಬಯಸುತ್ತೇವೆ ಎಂದು ಉಪ ವಿಭಾಗ, ಶಿವಮೊಗ್ಗ ಇವರಿಗೂ, ತಹಶೀಲ್ದಾರ್, ತೀರ್ಥಹಳ್ಳಿ ತಾಲ್ಲೂಕು ಇವರಿಗೂ ಮನವಿ ಮಾಡಿಕೊಂಡಿರುವುದನ್ನು ತಮ್ಮ ಅವಗಾಹನೆಗೆ ತರಬಯಸುತ್ತೇವೆ.ತಾವು ಈ ಬಗ್ಗೆ ಗ್ರಾಮಸ್ಥರು ಹಾಗೂ ಸಾಗುವಳಿದಾರರ ಸಮ್ಮುಖದಲ್ಲಿ ದಬ್ಬಣಗದ್ದೆ ಗ್ರಾಮದ ಸ.ನಂ. 17, 83 ಮತ್ತು 84ರ ಜಮೀನುಗಳ ಸ್ಥಳ ಖುದ್ದು ಪರಿಶೀಲನೆ ನಡೆಸಿ, ವಾಸ್ತವಾಂಶಗಳನ್ನು ಪರಿಶೀಲಿಸಿ, ನೂರಾರು ವರ್ಷಗಳಿಂದ ಸರ್ಕಾರಿ ಭೂಮಿಯಾಗಿರುವುದನ್ನು ಈಗ ಖಾಸಗಿಯವರು ದಾಖಲೆಗಳನ್ನು ಸೃಷ್ಟಿಸಿಕೊಂಡು ತಮ್ಮ ಹೆಸರಿಗೆ ಹಕ್ಕುದಾಖಲೆ ಮಾಡಿಸಿಕೊಳ್ಳಲು ಹೊರಟಿರುವುದು ಕಾನೂನು ಬಾಹಿರವಾಗಿರುವುದನ್ನು ತಾವು ಪರಿಶೀಲಿಸಿ, ಖಾಸಗಿ ವ್ಯಕ್ತಿ ನೀಡಿರುವ ಪ್ರಸ್ತಾವನೆಯನ್ನು ತಿರಸ್ಕರಿಸಿ ರದ್ದುಪಡಿಸಿಕೊಡಬೇಕೆಂದು, ಸ.ನಂ. 17, 83 ಮತ್ತು 84ರ ಜಮೀನುಗಳನ್ನು ಸರ್ಕಾರಿ ಭೂಮಿಯಾಗಿ ಮುಂದುವರೆಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪೂರ್ಣೇಶ್ ಕೆಳಕೇರಿ (ಕೆಡಿಪಿ ಸದಸ್ಯರು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರು ತೀರ್ಥಹಳ್ಳಿ ), ಸುರೇಂದ್ರ ಹಾರೆಕೊಪ್ಪ, ರವಿ ಹಾರೆಕೊಪ್ಪ, ರಾಘವೇಂದ್ರ ಹಾರೇಕೊಪ್ಪ, ಮಂಜುನಾಥ್ ಹಾರೆಕೊಪ್ಪ, ರಾಘವೇಂದ್ರ ಭೀಮನಕೊಂಡ, ಶ್ರೀನಂದ ದಬ್ಬಣಗದ್ದೆ ಡಿಸಿ ಅವರಿಗೆ ರೈತರು ಗ್ರಾಮಸ್ತರ ಪರವಾಗಿ ಮನವಿ ಕೊಟ್ಟವರು
ಕರೆಂಟ್ ಲೈನ್ ತುಳಿದು ಹಸು ಸಾವು
* ಕಡೆಮಕ್ಕಿ ಪ್ರಮೋದ್ರವರ ತೋಟದಲ್ಲಿ ಘಟನೆ: ಮೆಸ್ಕಾಂ ನಿರ್ಲಕ್ಷ್ಯ
* ಕೆಇಬಿಗೆ ಅನೇಕ ಬಾರಿ ಸಮಸ್ಯೆ ಬಗ್ಗೆ ದೂರು,ಬಗೆಹರಿಯದ ಸಮಸ್ಯೆ
ತೀರ್ಥಹಳ್ಳಿ: ತೋಟದಲ್ಲಿ ಕರೆಂಟ್ ಲೈನ್ ತುಂಡಾಗಿ ಬಿದ್ದ ಪರಿಣಾಮ ಹಸುವೊಂದು ಬಲಿಯಾದ ಘಟನೆ ತಾಲೂಕಿನ ಕಡೆಮಕ್ಕಿ ಪ್ರಮೋದ್ ಎಂಬುವರ ತೋಟದಲ್ಲಿ ನಡೆದಿದೆ.ಈ ಸಮಯದಲ್ಲಿ ಅದೇ ಜಮೀನಿನಲ್ಲಿ ಹಲವು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು,ಆಗಬಹುದಾಗಿದ್ದ ಭಾರೀ ಅನುಹುತವೊಂದು ತಪ್ಪಿದೆ.ಈ ಸಂಬಂಧ ಮೆಸ್ಕಾಂ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಗೆ ಮೆಸ್ಕಾಂ ನಿರ್ಲಕ್ಷ್ಯವೇ ಕಾರಣ, ಗ್ರಾಮಸ್ಥರ ಆಕ್ರೋಶ: ಪ್ರಮೋದ್ರವರ ತೋಟದಲ್ಲಿ ಹಾದುಹೋಗಿರುವ ಕರೆಂಟ್ ಲೈನ್ ಸಮಸ್ಯೆ ಬಗ್ಗೆ ಹಾಗೂ ಅಪಾಯದ ಸುಳಿವಿರುವ ಬಗ್ಗೆ ಈ ಹಿಂದೆ ಅನೇಕ ತೀರ್ಥಹಳ್ಳಿ ಮೆಸ್ಕಾಂ ಕಛೇರಿಗೆ ದೂರು ನೀಡಲಾಗಿತ್ತಾದರೂ ಅಧಿಕಾರಗಳು ಯಾವುದೇ ಕ್ರಮಕೈಗೊಳ್ಳದಿರುವುದು ಈ ಘಟನೆಗೆ ಕಾರಣವಾಗಿದೆ. ಅಲ್ಲದೇ ಆ ಸಂದರ್ಭದಲ್ಲಿ ಕೃಷಿ ಕಾರ್ಮಿಕರು,ರೈತರು ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಇದರಿಂದ ಭಾರಿ ಅನಾಹುತವೊಂದು ತಪ್ಪಿ ವಿದ್ಯುತ್ ಶಾಕ್ಗೆ ಪ್ರಮೋದ್ರವರ ಹಸು ಬಲಿಯಾಗಿದೆ. ಈ ಘಟನೆಗೆ ಮೆಸ್ಕಾಂ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
– ವಳಗೇರಿ ರಸ್ತೆ ಅವ್ಯವಸ್ಥೆ: ಜನರ ಪರದಾಟ!
ಬೆಜ್ಜವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಳಗೇರಿಯಲ್ಲಿ ರಸ್ತೆ ಅವ್ಯವಸ್ಥೆಯಿಂದ ಜನತೆ ಪರದಾಟ ನಡೆಸುತ್ತಿದ್ದಾರೆ.ಶಾಲಾ ಕಾಲೇಜು ಮಕ್ಕಳು ಕೂಡ ಇದೆ ಮಾರ್ಗದಲ್ಲಿ ಸಂಚಾರ ಮಾಡಬೇಕು. ಅದರೆ ಕೆಸರು ಮಯ ರಸ್ತೆ ಸಮಸ್ಯೆಯಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ.