ಬಿಜೆಪಿಗೆ 14 ಕೋಟಿ ಸದಸ್ಯರು, 2 ಕೋಟಿ ಕಾರ್ಯಕರ್ತರು!
– ಈಗ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿ
– ಬಿಜೆಪಿಗೆ ಜೈ ಎಂದ ಜನ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ
ಬಿಜೆಪಿ ಜನ ಪ್ರತಿನಿಧಿಗಳಲ್ಲೂ ನಂ. 1
– 240 ಲೋಕಸಭಾ ಸದಸ್ಯರು
– 99 ರಾಜ್ಯಸಭಾ ಸದಸ್ಯರು
– 1,500 ಶಾಸಕರು
– 170 ವಿಧಾನ ಪರಿಷತ್ ಸದಸ್ಯರು.
– 20 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ
– 13 ರಾಜ್ಯಗಳಲ್ಲಿ ಬಿಜೆಪಿಯದ್ದೇ ಸರ್ಕಾರ
NAMMMUR EXPRESS NEWS
ವಿಶಾಖ ಪಟ್ಟಣಂ: ಭಾರತೀಯ ಜನತಾ ಪಾರ್ಟಿ ಈಗ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ ಕೋಟಿ ಸದಸ್ಯರು,2 ಕೋಟಿ ಸಕ್ರಿಯ ಕಾರ್ಯಕರ್ತರ ಬಳಗ ಹೊಂದುವ ಮೂಲಕ ಈಗ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ.
ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ವಿಶಾಖಪಟ್ಟಣಂನಲ್ಲಿ ಪಕ್ಷದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ”ಬಿಜೆಪಿ 14 ಕೋಟಿ ಸದಸ್ಯರನ್ನು ಹೊಂದಿದ್ದು, ಆ ಪೈಕಿ 2 ಕೋಟಿ ಸಕ್ರಿಯ ಕಾರ್ಯಕರ್ತರಿದ್ದಾರೆ. ಪಕ್ಷವು ದೇಶದಲ್ಲಿ 240 ಲೋಕಸಭಾ ಸದಸ್ಯರು, 99 ರಾಜ್ಯಸಭಾ ಸದಸ್ಯರು, 1,500 ಶಾಸಕರು ಹಾಗೂ 170 ವಿಧಾನ ಪರಿಷತ್ ಸದಸ್ಯರನ್ನು ಹೊಂದಿದೆ. ದೇಶದ 20 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವಿದ್ದು, ಅದರಲ್ಲಿ 13 ರಾಜ್ಯಗಳಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ. ದೇಶದಲ್ಲಿಅತಿ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿರುವ ಪಕ್ಷ ಬಿಜೆಪಿಯೇ ಆಗಿದೆ,” ಎಂದು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ”ಬಿಜೆಪಿ ಹೊಣೆಗಾರಿಕೆ ಇರುವ ಮತ್ತು ಜನರಿಗೆ ಸ್ಪಂದಿಸುವ ಪಕ್ಷವಾಗಿದ್ದು,ಸೈದ್ಧಾಂತಿಕ ಪಕ್ಷವಾದ ಕಾರಣ ವಿಶ್ವದ ಅತಿದೊಡ್ಡ ಪಕ್ಷವಾಗಿ ಬೆಳೆಯಲು ಸಾಧ್ಯವಾಗಿದೆ,” ಎಂದರು. ನಡ್ಡಾ ಘೋಷಣೆ ಬೆನ್ನಲ್ಲಿಯೇ ಬಿಜೆಪಿಯ ವೆಬ್‌ಸೈಟ್‌ನಲ್ಲಿ ಸಹ, ‘ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ’ ಎಂದು ಬರೆದುಕೊಳ್ಳಲಾಗಿದೆ.
