Categories
ಸಾಗರ

ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಮನೆ ಭಸ್ಮ!

ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಮನೆ ಭಸ್ಮ!
– ಸಾಗರದಲ್ಲಿ ಸುಟ್ಟುಹೋದ ಮನೆ: ಅಪಾರ ನಷ್ಟ
– ನಿದ್ದೆಯಿಂದ ಏಳುವಷ್ಟರಲ್ಲಿ ಮನೆಯೇ ಇಲ್ಲ!

NAMMUR EXPRESS NEWS
ಸಾಗರ: ಸಾಗರ ತಾಲೂಕಿನ ಆನಂದಪುರ ಸಮೀಪದ ಸಿದ್ಧೇಶ್ವರ ಕಾಲೋನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಮನೆ ಭಸ್ಮವಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಸೀನಪ್ಪ ಎಂಬುವವರ ಮನೆ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಹೋಗಿದೆ. ಬೆಳಿಗ್ಗೆ 5:30ರ ವೇಳೆಗೆ ಮನೆಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕುಟುಂಬಸ್ಥರು ಎದ್ದು ನೋಡುವ ಹೊತ್ತಿಗೆ ಮನೆಯಲ್ಲಿ ಬೆಂಕಿ ಆವರಿಸಿಕೊಂಡಿದೆ. ಮನೆಯ ಹಿಂಭಾಗದಲ್ಲಿಟ್ಟಿದ್ದ ವಾಷಿಂಗ್ ಮಿಷನ್ ಹಾಗೂ ಹಂಚಿನ ಮನೆಯಾಗಿದ್ದರಿಂದ ಮೇಲ್ಬಾಗದ ಚಾವಣಿ ಸುಟ್ಟು ಕರಕಲಾಗಿದೆ.ಕೋಳಿಗಳು ಕೂಡ ಸಜೀವ ದಹನಗೊಂಡಿದ್ದು, ಊರಿನ ಅಕ್ಕಪಕ್ಕದವರು ಬೆಂಕಿಯನ್ನು ಗಮನಿಸಿ ಬೆಂಕಿಯನ್ನು ಆರಿಸುವ ಕಾರ್ಯಕ್ಕೆ ಸಹಕಾರಿಯಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಇಂದ ಮನೆ ಸುಟ್ಟು ಕರಕಲಾದ ವಿಷಯ ತಿಳಿಯುತ್ತಿದ್ದಂತೆ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿ ವೈಯಕ್ತಿಕ ಧನ ಸಹಾಯ ಮಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.