Categories
ಸಾಗರ

ಬೆಂಗಳೂರಿನಂತಹ ನಗರಗಳಿಗೆ ಸೀಮಿತವಾಗಿದ್ದ ಭೂಕಬಳಿಕೆ ಸಾಗರಕ್ಕೂ ಕಾಲಿಟ್ಟಿದೆ – ಹರತಾಳು ಹಾಲಪ್ಪ

ಬೆಂಗಳೂರಿನಂತಹ ನಗರಗಳಿಗೆ ಸೀಮಿತವಾಗಿದ್ದ ಭೂಕಬಳಿಕೆ ಸಾಗರಕ್ಕೂ ಕಾಲಿಟ್ಟಿದೆ – ಹರತಾಳು ಹಾಲಪ್ಪ

* ನಕಲಿ ದಾಖಲೆ ಸೃಷ್ಠಿಸುವ ದೊಡ್ಡ ಜಾಲ ತಾಲೂಕಿನಲ್ಲಿದೆ
* ದಕ್ಷ ಅಧಿಕಾರಿಗಳಿದ್ದರೂ ಕೆಲಸ ಮಾಡಲು ಬಿಡುತ್ತಿಲ್ಲ

NAMMUR EXPRESS NEWS
ಸಾಗರ : ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿಗಳಿಸುವ ಕೆಲಸವನ್ನು ಅಧಿಕಾರಸ್ತ ರಾಜಕಾರಣಿಗಳು ಮತ್ತವರ ಹಿಂಬಾಲಕರು ಮಾಡುತ್ತಿದ್ದು, ಇವರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಕಲಿ ದಾಖಲೆ ಸೃಷ್ಟಿ ಮಾಡುವ ದೊಡ್ಡ ಜಾಲವೊಂದು ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದು ಇದಕ್ಕೆ ಅಧಿಕಾರಸ್ತ ರಾಜಕಾರಣಿಗಳ, ಅಧಿಕಾರಿಗಳ ಕೃಪಕಟಾಕ್ಷ ಇದೆ ಎಂದರು.
ನಗರ ಸಮೀಪದ ಮಂಕೋಡು ಗ್ರಾಮದ ಸ.ನಂ. 12ರಲ್ಲಿ 16 ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಲಾಗಿದೆ. ಸುಮಾರು32 ಕೋಟಿ ರೂ. ಮಾರಕಟ್ಟೆ ಬೆಲೆ ಜಮೀನಿಗೆ ಇದ್ದು ಶೇ. 75ರಷ್ಟನ್ನು ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ತಹಶೀಲ್ದಾ‌ರ್, ಬ್ರೋಕರ್‌ಗಳು ಭಾಗಿಯಾಗಿದ್ದಾರೆ. ಕಮೀಷನ್‌ ಹಂಚಿಕೆಯಲ್ಲಿ ಆಗಿರುವ ಲೋಪದಿಂದ ಪ್ರಕರಣ ಬೆಳಕಿಗೆ ಬಂದಿದೆ. ಉಪವಿಭಾಗಾಧಿಕಾರಿಗಳು ದಕ್ಷರಿದ್ದರೂ ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲೆ ಸಾಕಷ್ಟು ವಿಶ್ವಾಸ ಇತ್ತಾದರೂ ಅವರು ಸಹ ನಿಷ್ಕ್ರಿಯರಾಗಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.