ಹೊಂಬುಜ ಕ್ಷೇತ್ರದಲ್ಲಿ ಪದ್ಮಾವತಿಯ ದೇವಿಯ ಜಾತ್ರೋತ್ಸವ ಆರಂಭ
– ಮಾ. 20 ರಿಂದ 24 ರವರೆಗೆ ವಾರ್ಷಿಕ ಜಾತ್ರೋತ್ಸವ
– ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
NAMMUR EXPRESS NEWS
ರಿಪ್ಪನ್ ಪೇಟೆ : ಹೊಂಬುಜ ಕ್ಷೇತ್ರದಲ್ಲಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮಿಗಳ ನೇತೃತ್ವದಲ್ಲಿ ಬುಧವಾರದಿಂದ ವಾರ್ಷಿಕ ಜಾತ್ರೋತ್ಸವ ಆರಂಭವಾಗಿದ್ದು ಮಾರ್ಚ್ 24ರ ವರೆಗೆ ನಡೆಯಲಿದೆ.
ಬುಧುವಾರ ಇಂದ್ರ ಪ್ರತಿಷ್ಠೆ, ವಿಮಾನ ಶುದ್ಧಿ, ಧ್ವಜಾರೋಹಣ, ಮಹಾ ನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತು ಶಾಂತಿ, ಮೃತ್ತಿಕಾ ಸಂಗ್ರಹ ವಿಧಿಗಳು ಜರುಗಿದವು. ಮಾ. 20 ರಂದು ರಾತ್ರಿ ಸಿಂಹ ವಾಹನೋತ್ಸವ ಮಾರ್ಚ್ 21 ರಾತ್ರಿ ಬೆಳ್ಳಿ ಪುಷ್ಪ ರಥೋತ್ಸವ ಮಾರ್ಚ್ 22 ರಂದು ಮೂಲ ನಕ್ಷತ್ರದಲ್ಲಿ ಮಹಾ ನೈವೇದ್ಯ ಪೂಜೆ, ಮಧ್ಯಾಹ್ನ 12:55 ಗಂಟೆಗೆ ರಥೋತ್ಸವ, ರಾತ್ರಿ ನಗರ ಶ್ರೀವಿಹಾರ, ಮಾರ್ಚ್ 23ರಂದು ತ್ರಿಕೂಟ ಜಿನಾಲಯದಲ್ಲಿ ಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳ ಅಭಿಷೇಕ, ಸಂಘ ಪೂಜೆ ಮಾರ್ಚ್ 24ರಂದು ಕುಂಕುಮೋತ್ಸವ ಧ್ವಜಾರೋಹಣದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ. ಮಾರ್ಚ್ 21ರಂದು ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ, ಸಾಹಿತಿ ಪ್ರೊಫೆಸರ್ ಪದ್ಮಾಶೇಖರ್ ಅವರಿಗೆ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
