Categories
ಶಿವಮೊಗ್ಗ

ಬೈಕ್ ಅಪಘಾತ, ವಿದ್ಯಾರ್ಥಿನಿ ಸಾವು..!

ಬೈಕ್ ಅಪಘಾತ, ವಿದ್ಯಾರ್ಥಿನಿ ಸಾವು..!
– ವಿಂಡ್ ವೀಲ್ ನೋಡಿಕೊಂಡು ಬರುವಾಗ ಕಬ್ಬಿಣದ ಅಂಗಡಿಗೆ ಡಿಕ್ಕಿ!
– ಶಿವಮೊಗ್ಗದಲ್ಲಿ ನಡೆದ ಘಟನೆ

NAMMUR EXPRESS NEWS
ಶಿವಮೊಗ್ಗ: ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ರಸ್ತೆಯ ಬದಿಗಿದ್ದ ಕಬ್ಬಿಣದ ಕಂಬಕ್ಕೆ ಗುದ್ದಿದ ಪರಿಣಾಮ ವಾಹನ ಚಲಾಯಿಸುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಭದ್ರಾವತಿಯ ಸ್ಪೂರ್ತಿ ಪುರಾಣಿಕ್ ಸಾವಿಗೀಡಾದವಳು. ಹಿಂಬದಿ ಕುಳಿತಿದ್ದ ಹರ್ಷ ಎಂಬಾತನಿಗೆ ತೀವ್ರ ಗಾಯಗಳಾಗಿವೆ. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕೆಎ 15 ಎಕ್ಸ್ 7237 ಕ್ರಮ ಸಂಖ್ಯೆಯ ಹೋಂಡ ಆ್ಯಕ್ಟಿವಾ ವಾಹನದಲ್ಲಿ ಸವಳಂಗ ಬಳಿ ಇರುವ ವಿಂಡ್ ವೀಲ್ (ಗಾಳಿ ಯಂತ್ರ)ನೋಡಿಕೊಂಡು ಶಿವಮೊಗ್ಗಕ್ಕೆ ಬರುವ ವೇಳೆ ರಸ್ತೆ ಅಪಘಾತ ಸಂಭವಿಸಿದ್ದು ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿ ಸಾವು ಕಂಡಿದ್ದಾಳೆ.

ವಿಂಡ್ ವೀಲ್ ನೋಡಿಕೊಂಡು ಸವಳಂಗ ರಸ್ತೆ ಮೂಲಕ ಬರುತ್ತಿರುವಾಗ ವಾಹನದ ನಿಯಂತ್ರಣ ತಪ್ಪಿ ರಸ್ತೆಯ ಮೇಲಿದ್ದ ಕಬ್ಬಿಣದ ಅಂಗಡಿಗೆ ಗುದ್ದಿದ್ದಾರೆ. ಭದ್ರಾವತಿಯ ಸ್ಪೂರ್ತಿ ಪುರಾಣಿಕ್ ಮತ್ತು ಹಿಂಬದಿ ಕುಳಿತಿದ್ದ ಹರ್ಷ ಎಂಬಾತನಿಗೆ ತೀರ್ವ ಗಾಯಗಳಾಗಿವೆ. ಸ್ಪೂರ್ತಿ ಶಿವಮೊಗ್ಗದ ಎನ್ ಇಎಸ್ ಐಎಎಸ್ ನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದರು. ಸ್ನೇಹಿತರಾದ ಆದರ್ಶ, ಸುಬ್ರಹ್ಮಣ್ಯ, ಓಂಕಾ‌ರ್, ಹರ್ಷ ಛಾಯಾ ಅಮಿತ್ ರೊಂದಿಗೆ ಹೋಗಿದ್ದು, ಕಲ್ಲಾಪುರದ ಬಳಿ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.