Categories
ಸಿನಿಮಾ

ತೆರೆಗೆ ಬರಲಿದೆ ಕಾಮಿಡಿ ಸಿನಿಮಾ ” ಮತ್ತೆ ಮತ್ತೆ”!

ತೆರೆಗೆ ಬರಲಿದೆ ಕಾಮಿಡಿ ಸಿನಿಮಾ ” ಮತ್ತೆ ಮತ್ತೆ”!
– ನೈರುತ್ಯ ಆರ್ಟ್ ಮೀಡಿಯಾ ನಿರ್ಮಾಣ
– ಡಾ.ಅರುಣ್ ಹೊಸಕೊಪ್ಪ ನಿರ್ದೇಶನ
– ಖ್ಯಾತ ಕಲಾವಿದರ ನಟನೆ: ಜ.19ಕ್ಕೆ ರಿಲೀಸ್

NAMMUR EXPRESS NEWS
ನೈರುತ್ಯ ಆರ್ಟ್ ಮೀಡಿಯಾ ಸಂಸ್ಥೆಯಲ್ಲಿ ನಿರ್ಮಾಣಗೊಂಡ ‘ಮತ್ತೆ ಮತ್ತೆ’ ಸಿನಿಮಾವು ರಾಜ್ಯಾದ್ಯಂತ ಜ.19ಕ್ಕೆ ತೆರೆ ಕಾಣಲಿದೆ. ಮಲೆನಾಡಿನ ಹೆಮ್ಮೆಯ ಡಾ. ಅರುಣ್ ಹೊಸಕೊಪ್ಪ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಿದ್ದಾರೆ. ತೀರ್ಥಹಳ್ಳಿ ಮೂಲದ ಡಾ. ಅರುಣ್, ಸಾಹಿತ್ಯ, ಸಂಗೀತ, ಕ್ರೀಡೆ, ಶಿಕ್ಷಣ, ಸಂಶೋಧನೆ, ಮಾಧ್ಯಮ, ಸಿನಿಮಾ ಹಾಗೂ ರಾಜಕೀಯ ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಈಗ ರಾಜಕೀಯದಲ್ಲಿ ಒಂದು ಪ್ರಯತ್ನದಲ್ಲಿ ಇರುವಾಗಲೇ ತಮ್ಮ ಆಸಕ್ತಿಯ ತಾವೇ ನಿರ್ದೇಶನ ಮಾಡಿರುವ ಸಿನಿಮಾವೊಂದು ತೆರೆಗೆ ಸಿದ್ಧವಾಗಿದೆ. ಇವರು ಆದರ್ಶ ಸಿನಿಮಾ ಸಂಸ್ಥೆಯಲ್ಲಿ ಒಂದು ವರ್ಷ ತರಬೇತಿ ಕೂಡ ಪಡೆದಿದ್ದಾರೆ. ಇದೇ ಜನವರಿ 19 ರಂದು ಇವರ ನೈಋತ್ಯ ಆರ್ಟ್ ಮೀಡಿಯಾ ಸಂಸ್ಥೆ ನಿರ್ಮಿಸಿದ ‘ಮತ್ತೆ ಮತ್ತೆ’ ಚಿತ್ರ ಬಿಡುಗಡೆಯಾಗುತ್ತಿದೆ.

ಹಿರಿಯ ಕಲಾವಿದರ ದಂಡು!

ಮತ್ತೆ ಮತ್ತೆ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಎಂ ಎಸ್ ಉಮೇಶ್, ಡಿಂಗ್ರಿ ನಾಗರಾಜ್, ಕೋಟೆ ಪ್ರಭಾಕರ್, ತುಮಕೂರು ಮೋಹನ್, ಪ್ರಕಾಶ್ ತುಮಿನಾಡು(ಕಾಂತಾರ ರಾಂಪ ), ಹೊನ್ನವಳ್ಳಿ ಕೃಷ್ಣ, ಮನದೀಪ್ ರಾಯ್, ಸುಮರಾವ್, ಸಿಲಿಲಲ್ಲಿ ಶ್ರೀನಿವಾಸ್, ಸಂಜನಾ, ವೈಷ್ಣವಿ, ಯಶೋಧ, ಕುಳ್ಳ ಅನಂತ, ಆರ್ ಜೆ ವಿಕ್ಕಿ ಇನ್ನು ಅನೇಕರು ನಟಿಸಿದ್ದಾರೆ.

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ

ಡಾ. ಅರುಣ್ ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದು, ಖ್ಯಾತ ಗಜಲ್ ಗಾಯಕ ಇಮ್ತಿಯಾಜ್ ಸುಲ್ತಾನ್ ಸಂಗೀತ ನೀಡಿದ್ದಾರೆ, ಅನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ‘ನಗಿಸುವ ಸಿನಿಮಾ ಮಾಡುವುದು ಕಷ್ಟದ ಕೆಲಸ ಆದರೂ ಅದರಲ್ಲಿ ಬಹುತೇಕ ತೃಪ್ತನಾಗಿದ್ದೇನೆ…
ನನ್ನ ಮೊದಲ ಈ ಸಿನಿಮಾಗೆ ನೀವೆಲ್ಲ ಬೆಂಬಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.