Categories
ಶಿವಮೊಗ್ಗ

ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಕ್ಕಳ ಸಂಭ್ರಮ

ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಕ್ಕಳ ಸಂಭ್ರಮ

– ಸಿ.ಎನ್. ಸಿ ಟ್ರೈನಿಂಗ್ ಪ್ರಮಾಣ ಪತ್ರ ವಿತರಣೆ: ಮಕ್ಕಳಿಗೆ ಬದುಕಿನ ಪಾಠ

– 3500 ಯುವ ಜನತೆಗೆ ಉದ್ಯೋಗ ಕೊಡಿಸಿದ ಸಂಸ್ಥೆ..!

NAMMUR EXPRESS NEWS

ಶಿವಮೊಗ್ಗ: ಶಿವಮೊಗ್ಗ ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ವಿದ್ಯಾರ್ಥಿಗಳಿಗೆ ಸಿ. ಎನ್. ಸಿ ಟ್ರೈನಿಂಗ್ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿಯ ವಿದ್ಯಾರ್ಥಿಗಳು ಮತ್ತು ಸಂಜಯ್ ಮೆಮೋರಿಯಲ್ ಪಾಲಿಟಕ್ನಿಕ್ ಸಾಗರದ ವಿದ್ಯಾರ್ಥಿಗಳು ಹಾಗು ಫೇಸ್(PES) ಪಾಲಿಟಕ್ನಿಕ್ ಶಿವಮೊಗ್ಗ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸಮಾರಂಭದಲ್ಲಿ ಅಧ್ಯಕ್ಷರಾಗಿ ಪರೋಪಕಾರಮ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಧರ್,  ದೇವೇಂದ್ರ ನಂದಿ ಗ್ಲಾಸ್ ಉದ್ಯಮಿಗಳು ಶಿವಮೊಗ್ಗ, ವಿರೇಂದ್ರ, ಇಂಜಿನಿಯರ್ ಅಸೋಶಿಯಷನ್ ಸೆಕ್ರೆಟರಿ ಶಿವಮೊಗ್ಗ, ರವಿ ಕುಮಾರ್ ಸಿವಿಲ್ ಇಂಜಿನಿಯರ್ ಮಕ್ಕಳಿಗೆ ಶುಭ ಹಾರೈಸಿ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.

ಪರೋಪಕಾರಮ್ ಸಂಸ್ಥೆಯ ಶ್ರೀಧರ್ ಅವರು ಮಾತನಾಡಿ ಮಕ್ಕಳಿಗೆ ಅವರ ಸ್ಕಿಲ್ ತುಂಬಾ ಮುಖ್ಯ. ಮುಂದಿನ ಜೀವನ ಸುಖಕರವಾಗಬೇಕಾದರೆ ನಮ್ಮ ದಾರಿಯನ್ನ ನಾವೇ ಕಂಡುಕೊಳ್ಳಬೇಕು ಎಂದರೆ ಅದಕ್ಕೆ ಒಳ್ಳೆತನ ಎಂಬುದು ಬೇಕು ಎಂದು ತಿಳಿಸಿದ್ದಾರೆ.

ಅತಿಥಿಗಳಾದ ದೇವೇಂದ್ರ ನಂದಿ ಗ್ಲಾಸ್ ಉದ್ಯಮಿಗಳು ಶಿವಮೊಗ್ಗ, ವೀರೇಂದ್ರ, ಇಂಜಿನಿಯರ್ ಅಸೋಶಿಯಷನ್ ಸೆಕ್ರೆಟರಿ ಶಿವಮೊಗ್ಗ,

ರವಿ ಕುಮಾರ್ ಸಿವಿಲ್ ಇಂಜಿನಿಯರ್, ರಾಮೋಜಿ ರಾವ್, ಹೋಟೆಲ್ ಉದ್ಯಮಿಗಳು, ಷಣ್ಮುಖ, ಮ್ಯಾನೇಜಿಂಗ್ ರೆಪ್ರೆಸೆಂಟೇಟಿವ್, ನಜೀರ್, ಮುಸ್ತಾಕ್ ಅಹಮದ್, ಆಸಮ್ಮ್ ಬಾನು ಅನೇಕರು ಇದ್ದರು.

3500 ಯುವ ಜನತೆಗೆ ಉದ್ಯೋಗ ಕೊಡಿಸಿದ ಸಂಸ್ಥೆ

ಶಿವಮೊಗ್ಗ ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಸಿ.ಎನ್. ಸಿ ತರಬೇತಿ ಜತೆಗೆ ವಿವಿಧ ಕೌಶಲ್ಯಗಳನ್ನು ಕಳಿಸಲಾಗುತ್ತಿದೆ. ಈಗಾಗಲೇ 3500ಕ್ಕೂ ಹೆಚ್ಚು ಮಂದಿ ದೇಶ ವಿದೇಶದಲ್ಲಿ ಉದ್ಯೋಗ ಪಡೆದಿದ್ದಾರೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಷಣ್ಮುಖ ಅವರ ಸೇವೆ ಅಪಾರ. ಅವರ ಶ್ರಮದಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.