ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿಯ ಅದ್ದೂರಿ ರಥೋತ್ಸವ
– ಪುರಾಣ ಪ್ರಸಿದ್ಧ ಹಾಗೂ ಶಿಕಾರಿಪುರದ ಆರಾಧ್ಯ ದೈವ ಶ್ರೀ ಹುಚ್ಚರಾಯಸ್ವಾಮಿ ಸನ್ನಿಧಾನ
– ಬಿ. ಎಸ್. ಯಡಿಯೂರಪ್ಪ ಸಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಕೆ
NAMMUR EXPRESS NEWS
ಶಿಕಾರಿಪುರ : ಶಿಕಾರಿಪುರದ ಆರಾಧ್ಯ ದೈವವಾದ ಪುರಾಣ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವರ ಸನ್ನಿಧಾನದಲ್ಲಿ ಏಪ್ರಿಲ್ 12 ರಂದು ನಡೆದ ಅದ್ದೂರಿ “ಶ್ರೀ ಹುಚ್ಚರಾಯಸ್ವಾಮಿ ರಥೋತ್ಸವ” ದಲ್ಲಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ, ಸಂಸದರಾದ ಬಿ ವೈ ರಾಘವೇಂದ್ರ ಅವರು,ರಾಜ್ಯ ಬಿಜೆಪಿ ಅಧ್ಯಕ್ಷರು ಶಾಸಕರಾದ ವಿಜಯೇಂದ್ರ ಯಡಿಯೂರಪ್ಪನವರು ಸಕುಟುಂಬ ಸಮೇತರಾಗಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
