Categories
ಚಿಕ್ಕಮಗಳೂರು ಶಿವಮೊಗ್ಗ

ಎನ್.ಆರ್ ಪುರ ಪಟ್ಟಣದ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ!

ಎನ್.ಆರ್ ಪುರ ಪಟ್ಟಣದ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ!
* ಶಾಸಕ ಟಿ.ಡಿ ರಾಜೇಗೌಡರ ಸತತ ಪ್ರಯತ್ನದ ಫಲ
* ಸಚಿವ ಸಂಪುಟ ಸಭೆಯಲ್ಲಿ 60 ಕೋಟಿ ಕಾಮಗಾರಿಗೆ ಅನುಮೋದನೆ

NAMMMUR EXPRESS NEWS
ಎನ್.ಆರ್ ಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎನ್.ಆರ್ ಪುರ ಪಟ್ಟಣ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಲು 60 ಕೋಟಿ ರೂ.ಗಳ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಹಲವು ದಿನಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟು ಅನೇಕ ಅಪಘಾತಗಳು ಸಂಭವಿಸಿತ್ತು. ಇದರಿಂದ ಸಾರ್ವಜನಿಕರು ತೀವ್ರ ಅನುಭವಿಸುವಂತಾಗಿತ್ತು. ಆದಷ್ಟು ಬೇಗ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ಸತತ ಪ್ರಯತ್ನದ ಫಲವಾಗಿ ಈಗ ಈ ರಸ್ತೆಯ ಅಭಿವೃದ್ಧಿ ನಡೆಸಲು 60 ಕೋಟಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ದೊರೆತಿದ್ದು, ಆ ಭಾಗದ ರಸ್ತೆ ಸಮಸ್ಯೆ ಬಗೆಹರಿದು ಪಟ್ಟಣ ಅಭಿವೃದ್ಧಿಗೊಳ್ಳುವ ಆಶಯ ಮೂಡಿದೆ.
ಶಾಸಕ ರಾಜೇಗೌಡ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.