Categories
ಶಿವಮೊಗ್ಗ

ತೀರ್ಥಹಳ್ಳಿ ಜಿಲ್ಲೆಗೆ ಫಸ್ಟ್….ಶಿಕಾರಿಪುರ ಲಾಸ್ಟ್!

– ಶಿವಮೊಗ್ಗದ ಮೂವರು ರಾಜ್ಯಕ್ಕೆ ಮೊದಲಿಗರು
– ರಾಜ್ಯ ದಲ್ಲೇ 4ನೇ ಸ್ಥಾನ ಪಡೆದ ಶಿವಮೊಗ್ಗ
– ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳು, ಪೋಷಕರ ಸಂಭ್ರಮ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿ ಮೊದಲ ಸ್ಥಾನ ಪಡೆದಿದ್ದು ಕೊನೆಯ ಸ್ಥಾನವನ್ನು ಶಿಕಾರಿಪುರ ಪಡೆದಿದೆ.
ತೀರ್ಥಹಳ್ಳಿ ಶೇ. 94.43, ಸಾಗರ ಶೇ. 90.21, ಹೊಸನಗರ ಶೇ. 89.60, ಸೊರಬ ಶೇ. 85.00, ಶಿವಮೊಗ್ಗ ಶೇ. 80.82, ಭದ್ರಾವತಿ 78.02, ಶಿಕಾರಿಪುರ ಶೇ.73.50 ಪಡೆದಿವೆ. ಒಟ್ಟು ಜಿಲ್ಲೆಯಲ್ಲಿ 21, 876 ಮಂದಿ ಪರೀಕ್ಷೆ ಬರೆದಿದ್ದು, 18,003 ಮಂದಿ ಪಾಸಾಗಿದ್ದಾರೆ. ಶೇ. 82.30 ಫಲಿತಾಂಶ ದಾಖಲಾಗಿದೆ.

ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಶಿವಮೊಗ್ಗ ವಿದ್ಯಾರ್ಥಿಗಳು!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಮೂವರು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿ ಶಿವಮೊಗ್ಗ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ. ಶಿವಮೊಗ್ಗ ನಗರದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ನಮನ.ಕೆ. ಶ್ರೀ ರಾಮೃಕೃಷ್ಣ ವಿದ್ಯಾಲಯದ ನಿತ್ಯಾ ಎಂ ಕುಲಕರ್ಣಿ, ಶ್ರೀ ಆದಿಚುಂಚನಗಿರಿ ಶಾಲೆಯ ಸಹಿಷ್ಣು.ಎನ್ ಇವರಿಗೆ ಹಾರ್ದಿಕ ಅಭಿನಂದನೆಗಳು.

ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳು, ಪೋಷಕರ ಸಂಭ್ರಮ

ತೀರ್ಥಹಳ್ಳಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು ರಾಜ್ಯಕ್ಕೆ ಅನೇಕ ಸ್ಥಾನ ಪಡೆದಿದೆ. ತೀರ್ಥಹಳ್ಳಿ ಶಿಕ್ಷಣ ಅಧಿಕಾರಿ ಗಣೇಶ ಅವರು ಸಂತಸ ವ್ಯಕ್ತಪಡಿಸಿ ಈ ಫಲಿತಾಂಶ ಬರಲು ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಶಾಲಾ ಆಡಳಿತ ಮಂಡಳಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶೈಕ್ಷಣಿಕ ಸಾಧನೆಗೆ ಶಾಸಕರ ಅಭಿನಂದನೆ

ತೀರ್ಥಹಳ್ಳಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ, ಶಾಲಾ ಆಡಳಿತ ಮಂಡಳಿಗೂ ಶಾಸಕ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.