ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ಟಾಪರ್
– 11 ರ್‍ಯಾಂಕ್ ಗಳನ್ನು ನೀಡಿದ ವಾಗ್ದೇವಿ ಶಿಕ್ಷಣ ಸಂಸ್ಥೆ
– ವಾಗ್ದೇವಿಗೆ ನೂರಕ್ಕೆ ನೂರರಷ್ಟು ಫಲಿತಾಂಶ..!
– 35 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ ಅಂಕ ಗಳಿಕೆ
NAMMUR EXPRESS NEWS
ತೀರ್ಥಹಳ್ಳಿ : 2024 – 25 ನೇಯ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ತೀರ್ಥಹಳ್ಳಿ ತಾಲೂಕಿನ
ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯು ಈ ವರ್ಷ ರಾಜ್ಯಕ್ಕೆ ಒಟ್ಟು 11
ರ್‍ಯಾಂಕ್ ಗಳನ್ನು ನೀಡಿರುತ್ತದೆ. ಒಟ್ಟು 113 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು 35 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. 84 ಅತ್ಯುನ್ನತ ಶ್ರೇಣಿಯನ್ನು, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದು ಶಾಲೆಗೆ ತಾಲ್ಲೂಕಿಗೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ
ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ
ಪ್ರೇಕ್ಷಾ ಎಂ ಪೂಜಾರಿ (623-3 rd Rank)
ತೇಜಸ್ ಎಂ ಶಣೈ (623-3 rd Rank)
ಶೀತಲ್ ಬಿ.ವಿ (622 – 4 th Rank)
ಕನ್ನಿಕಾ ಜಿ ಶೆಟ್ಟಿ (621 – 5 th Rank)
ನಿರೀಕ್ಷಾ ಪಿ ಆಚಾರ್ಯ (621 – 5 th Rank)
ಸಾನಿಕಾ ಎಂ ಹೆಗಡೆ ( 621 – 5 th Rank)
ತನು ಗೌಡ (620 – 6 th Rank)
ಸಂಪ್ರೀತ್ ಭೋಂಸ್ಲೆ (617 – 9 th Rank)
ಶ್ರೇಯಾ ಕೆ ಎಂ (617 – 9 th Rank)
ಸಾನ್ವಿ ಕೆ ಯು (616 – 10 th Rank )
ಶಮಂತ್ ವೈ ಎಂ (616 – 10 th Rank)
ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ ಮತ್ತು
ಪೋಷಕರು ಅಭಿನಂದಿಸಿರುತ್ತಾರೆ.
ಪಿಯುಸಿಯಲ್ಲಿ ಕೂಡ ಟಾಪರ್
ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಕೊಟ್ಟು 6 ಪ್ರಮುಖ ಸ್ಥಾನ ಪಡೆದಿದ್ದು, ತೀರ್ಥಹಳ್ಳಿ ವಾಗ್ದೇವಿ ಶಿಕ್ಷಣ ಸಂಸ್ಥೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೂಡ ರಾಜ್ಯದಲ್ಲಿ ಸಾಧನೆ ಮಾಡಿದೆ.
