UPSC ಯಲ್ಲಿ 425 ನೇ ರ‍್ಯಾಂಕ್ ಪಡೆದು ಮೇಘನಾ
– ಛಲ ಬಿಡದೆ ಸಾಧನೆ ಮಾಡಿ, ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ
NAMMUR EXPRESS NEWS
ನಮ್ಮ ಶಿವಮೊಗ್ಗಕ್ಕೆ ಕೀರ್ತಿ ತಂದ ಮೇಘನಾ, ಪದವಿ ಪಡೆದು ಛಲ ಬಿಡದ ತ್ರಿವಿಕ್ರಮನಂತೆ ಸಾಧನೆ ಮಾಡಿದ ಅಪ್ರತಿಮ ಸಾಧಕಿ. ಮೇಘನಾ UPSC ಯಲ್ಲಿ 425 ನೇ ರ‍್ಯಾಂಕ್ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಈಕೆಯ ಕನಸು ನನಸಾಗಲು ಕಾರಣವೇನೆಂದು ಅವಲೋಕಿಸಿದಾಗ,ಮಾಜಿ ರಾಷ್ಟ್ರಪತಿಗಳಾದ ಶ್ರೀಯುತ ಅಬ್ದುಲ್ ಕಲಾಂ ರವರು ಇವರು ಓದುತ್ತಿದ್ದ ಶಾಲೆಗೆ ಬೇಟಿ ನೀಡಿದ್ದರಂತೆ, ಆ ಸಮಯದಲ್ಲಿ ಅವರು ಹೇಳಿದ್ದು ಇಷ್ಟೆ.”small aim is crime,big aim is excellent”ಎಂದರಂತೆ. ಅವತ್ತಿನಿಂದ ಈಕೆಯ ಮನಸ್ಸಿನಲ್ಲಿ ಜಿಲ್ಲೆಯ ಕೀ ಪೋಸ್ಟ್ಗೆ ಹೋಗಬೇಕೆಂಬ ಛಲ ಬಂತಂತೆ. ಅದಕ್ಕೆ ಪೋಷಕರು ಸಹಕರಿಸಿದರಂತೆ.
ಆಡಳಿತ ನಾಗರಿಕ ಸೇವೆಗೆ ಮೇಘನಾಳಿಗೆ ಅವಕಾಶ ಸಿಕ್ಕಿದೆ. ಶಿವಮೊಗ್ಗದ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ. ಇವಳ ಸಾಧನೆ ಮೆಚ್ಚಿ ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಅರುಣ್ ಶಂಕರ್ ಮೂರ್ತಿ, ಡಾ ಶ್ರೀ, ಧನಂಜಯ ಸರ್ಜಿ, ಲೋಕಸಭಾ ಸದಸ್ಯರಾದ ಸನ್ಮಾನ್ಯ ಬಿ.ವೈ.ರಾಘವೇಂದ್ರ ರವರು,ಮಾಜಿ ಉಪ ಮುಖ್ಯ ಮಂತ್ರಿಗಳಾದ ಶ್ರೀ ಈಶ್ವರಪ್ಪ. ಹೊಂಗಿರಣ ಸಂಸ್ಥೆಯವರು, ಜಿಲ್ಲಾ ಬ್ರಾಹ್ಮಣ ಮಹಾ ಸಭಾ ದವರು, ಶಿವಮೊಗ್ಗ ಶಾಸ್ತ್ರಿಗಳ ಕುಟುಂಬದವರು , ಜೇಸಿಐ ರವರು ಹಾಗೂ ಇನ್ನೂ ಅನೇಕ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ. ಮೇಘನಾ ಬಿ.ಎಂ. ರವರು ತರಬೇತಿಗೆ ಹೊರಡಲಿದ್ದಾರೆ . ತಂದೆ ಮೋಹನ್ ರವರು ವಕೀಲರಾಗಿದ್ದಾರೆ. ತಾಯಿ ಡಾ. ವತ್ಸಲಾ ರವರು ನಿವೃತ್ತ ಸಹಾಯಕ ಪ್ರಾಧ್ಯಾಪಕರು. ತಂದೆ ಮತ್ತು ತಾಯಿಯವರ ಆಶೀರ್ವಾದದಿಂದ ಮತ್ತು ಸಹಕಾರದಿಂದ ಸಾಧನೆ ಮಾಡಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಈಕೆ ಸಂಗೀತ ಮತ್ತು ಭರತ ನಾಟ್ಯದಲ್ಲಿ ಜೂನಿಯರ್ ಮಾಡಿದ್ದಾರೆ, ಗಮಕ ಕಲಿತಿದ್ದಾರೆ . ಹೊಂಗಿರಣ ಸಂಸ್ಥೆಯ ಮೂಲಕ ನಾಟಕದ ಅಭಿನಯನದಲ್ಲಿ ಮುಂಚೂಣಿಯಲ್ಲಿದ್ದು ಉತ್ತಮ ಕಲಾವಿದೆಯಾಗಿ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಕೀರ್ತಿ ಇವರದ್ದು. ಇವರು ಹೇಳುತ್ತಾರೆ UPSC ಪಾಸ್ ಆಗಿದ್ದು,achievement ಅಂದುಕೊಂಡಿಲ್ಲ, ಇಷ್ಟೆಲ್ಲ ಸಾಧನೆ ಮಾಡಿದ ಸಾಧಕಿ, ಮೇಘನಾ ರವರು 16.06.2025ರಂದು ಚತುರ್ಭುಜರಾಗುತ್ತಿದ್ಧಾರೆ . ಸಾಫ್ಟವೇರ್ ಇಂಜಿನಿಯರ್ ಶ್ರೀ ಕೌಶಿಕ್ ರವರನ್ನು ವಿವಾಹ ವಾಗುತ್ತಿದ್ದಾರೆ. UPSC ಪಾಸ್ ಆದ ಮೇಲೆ ಮದುವೆ ಅಂದು ಕೊಂಡಿದ್ದರಂತೆ. ಅದೇ ರೀತಿಯಲ್ಲಿ ಆಗುತ್ತಿದೆ ಎಂದರು.
ಅಭಿನಂದನೆಗಳು ಮೇಘನಾ ರವರಿಗೆ.
