Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಳ…!!

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಳ…!!
– ತೀರ್ಥಹಳ್ಳಿ,ಸಾಗರ ಈ ಭಾಗಗಳಲ್ಲಿ ಭಾರಿ ಮಳೆ
– ತುಂಗಾ ನದಿ ನೀರು ಕೂಡ ಏರಿಕೆ ಎಚ್ಚರ

NAMMUR EXPRESS NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದೆ. ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಮುಂಗಾರು ಆರಂಭಕ್ಕೂ ಮುನ್ನವೆ ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗುತ್ತಾ ಇದೆ. ಬಿಟ್ಟು ಬಿಟ್ಟು ಮಳೆ ಆಗುತ್ತಾ ಇರುವುದು ವಾತಾವರಣದಲ್ಲಿ ಸಾಕಷ್ಟು ರೀತಿಯ ಏರುಪೇರು ಉಂಟಾಗಿದೆ. ವಾತಾವರಣ ಕೂಡ ತಂಪಾಗಿದ್ದು ಇದರಿಂದ ಅನಾರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯ ಈಗಾಗಲೇ ಕೋವಿಡ್ ಸಮಸ್ಯೆ ಕೂಡ ಕಂಡು ಬರುತ್ತಾ ಇದ್ದು ಜನರು ಜಾಗೃತಿಯಿಂದ ಇರುವುದು ಮುಖ್ಯವಾಗುತ್ತದೆ.

ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ವಿವಿಧೆಡೆ ಮರಗಳು ಧರೆಗುರುಳಿವೆ. ಮನೆಗಳ ಮೇಲೆ ಮರಗಳು ಉರುಳಿರುವ ಘಟನೆಗಳು ಕೂಡ ನಡೆದಿದೆ.
ವಿವಿಧೆಡೆ ಭಾರಿ ಮಳೆಯಿಂದಾಗಿ ವಿದ್ಯುತ್‌ ವ್ಯತ್ಯಯವಾಗಿದೆ. ಕಳೆದ ಎರಡು ದಿನದಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮೊಬೈಲ್‌ ನೆಟ್‌ವರ್ಕ್‌ ಗೂ ಕೂಡ ತೊಂದರೆ ಉಂಟಾಗಿದೆ. ತೀರ್ಥಹಳ್ಳಿ ಭಾಗದಲ್ಲಿ ಭಾರಿ ಮಳೆ ಕಾರಣ ತುಂಗಾ ನದಿ ನೀರು ಏರಿಕೆ ಹಾಗೆ ಎಲ್ಲಾ ನದಿ, ಹಳ್ಳಗಳಲ್ಲಿ ನೀರು ಏರಿಕೆಯಾಗಿದೆ. ನದಿ ತೀರ ಹಾಗೂ ಹೊರಗೆ ಹೋಗಬೇಡಿ ಎಂದು ಎಚ್ಚರಿಕೆಯನ್ನು ನೀಡಲಾಗಿದೆ ಜನರು ತುಂಬಾ ಎಚ್ಚರಿಕೆಯನ್ನು ವಹಿಸಬೇಕು ಏಕೆಂದರೆ ಈಗ ನದಿ ನೀರಿಗಳು ಹೆಚ್ಚಾಗಿದ್ದು ಜನರ ಜೀವಕ್ಕೆ ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇದೆ, ಆದ್ದರಿಂದ ಜಾಗೃತಿಯಿಂದ ಇರುವುದು ತುಂಬಾ ಮುಖ್ಯವಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.