ರಾಜ್ಯದ ಶಿಕ್ಷಣದಲ್ಲಿ ಶಿವಮೊಗ್ಗ ನಂ. 1..!
– ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿನಿ ಸಂಜನಾ ಸಾಧನೆ: ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ
– ಪೂರ್ಣ ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದ ವಿದ್ಯಾರ್ಥಿನಿ!
– ತೀರ್ಥಹಳ್ಳಿಯ ದೀಕ್ಷಾ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲಿಗಳು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯ ವಿದ್ಯಾರ್ಥಿನಿ ಸಂಜನಾ ಮೊದಲು ಬರೆದ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕ ಪಡೆದುಕೊಂಡಿದ್ದಳು. ಜೀವಶಾಸ್ತ್ರ ವಿಷಯದಲ್ಲಿ ಒಂದಂಕವನ್ನು ಕಳೆದುಕೊಂಡಿದ್ದಳು. ಇದರಿಂದ ರಾಜ್ಯದ ಟಾಪರ್ ಗಳಲ್ಲಿ ತಾನೂ ಒಬ್ಬಳಾಗಬೇಕೆಂಬ ಕನಸು ನನಸಾಗಿರಲಿಲ್ಲ. ಇದೀಗ 625/625 ಅಂಕ ಗಳಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಶಿವಮೊಗ್ಗ ಜಿಲ್ಲೆ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಎರಡೂ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದೆ.
ಸಂಜನಾ ಈಗ ಜೀವಶಾಸ್ತ್ರ ವಿಷಯದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಮೂಲಕ ಜೀವಶಾಸ್ತ್ರದಲ್ಲಿ 80 ಕ್ಕೆ 80 ಅಂಕ ಗಳಿಸಿ, ಆ ಮುಖೇನ ಒಟ್ಟು ಅಂಕಗಳಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯದ ಟಾಪರ್ ಗಳಲ್ಲಿ ಒಬ್ಬಳಾಗಿದ್ದಾಳೆ. ಈ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾಳೆ. ಸಂಜನಾ ಅವರ ತಂದೆ ಸುರೇಶ್ ಎಂ. ಅವರು ಪೊಲೀಸ್ ಇಲಾಖೆಯಲ್ಲಿ ಎಸ್ ಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ರೇಖಾ ಅವರು ಗೃಹಿಣಿ. ಶಾಲೆಯ ಆಡಳಿತ ಮಂಡಳಿ ಈಗ ಆಕೆ ಮತ್ತು ಪೋಷಕರನ್ನು ಗೌರವಿಸಿದೆ.