ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
– ನೀಟ್ ಫಲಿತಾಂಶ ಪ್ರಕಟ: ರಾಷ್ಟ್ರ ಮಟ್ಟದಲ್ಲಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳು
– 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸ್ಥಾನ
NAMMUR EXPRESS NEWS
ದೇಶದ ಪ್ರಮುಖ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಮೇ 4 ರಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್ (NEET) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ PU ಕಾಲೇಜಿನ ವಿದ್ಯಾರ್ಥಿಗಳು ಶ್ರೇಷ್ಠ ಅಂಕಗಳೊಂದಿಗೆ ಭರ್ಜರಿ ಸಾಧನೆ ನೀಡಿದ್ದಾರೆ.
ಈ ವರ್ಷದ ಫಲಿತಾಂಶದಲ್ಲಿ, ವಿದ್ಯಾರ್ಥಿಗಳಾದ ಸುಮಂತ್ ಗೌಡ ಎಸ್.ಡಿ 596 ಅಂಕಗಳನ್ನು ಪಡೆದು 99.923686 ಪರ್ಸಂಟೈಲ್ ಸಾಧಿಸಿದರು. ಅವರು ರಾಷ್ಟ್ರಮಟ್ಟದಲ್ಲಿ 1623ನೇ ರ್ಯಾಂಕ್ ಪಡೆದಿದ್ದಾರೆ. ಪ್ರಜ್ವಲ್ ಎಸ್.ಎನ್ 588 ಅಂಕಗಳೊಂದಿಗೆ 99.686435 ಪರ್ಸಂಟೈಲ್ ಗಳಿಸಿ 2483ನೇ ರ್ಯಾಂಕ್ ಪಡೆದರೆ, ರಾಜೇಶ್ ಹೆಚ್.ಎ 583 ಅಂಕಗಳೊಂದಿಗೆ 99.857286 ಪರ್ಸಂಟೈಲ್ ಸಾಧಿಸಿ 3025ನೇ ರ್ಯಾಂಕ್ ಪಡೆದಿದ್ದಾರೆ.
ಇವರ ಜೊತೆಗೆ ಸಾತ್ವಿಕ್ ಭಂಡಾರಿ (560), ಹೇಮಂತ್ ಕುಮಾರ್ (551), ಪ್ರಾಪ್ತಿ ಶೆಟ್ಟಿ (541), ಪ್ರಥಮ್ ಪಟೇಲ್ ಎಚ್.ಡಿ (539), ಸಂಗೀತಾ ಬಿ.ಎಮ್ (536), ಶ್ರೀನಿಧಿ ಡಿ (531), ವಿನಯ್ ಎಸ್ (523), ಸ್ನೇಹಾ ಬಸವರಾಜ್ ಬಿ. (521), ಯುವರಾಜ್ ಪಟೇಲ್ (521), ಗಣೇಶ್ ಜಿ (519), ಶಕ್ತಿ ಎಸ್. ಗೌಡ (519), ಸೃಷ್ಟಿ ಪಾಟೀಲ್ (515), ಶ್ರೀನಿಧಿ ಪಿ.ಯು (514), ನಿನಾದ್ ಹೆಚ್.ಎಮ್ (513), ಪ್ರಥಮ್ ಎಸ್.ಪಿ (512), ಧ್ರುವ ಪಿ (509), ಮೇಘನಾ ಯು.ವೈ (509), ಅಭಿನಂಧನ್ (504) ಮೊದಲಾದವರು 500ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಶ್ಲಾಘನೀಯ ಸಾಧನೆ ನೀಡಿದ್ದಾರೆ.
ಈ ಪರೀಕ್ಷೆಯಲ್ಲಿ 500ಕ್ಕಿಂತ ಹೆಚ್ಚು ಅಂಕಗಳನ್ನು 28 ವಿದ್ಯಾರ್ಥಿಗಳು ಪಡೆದಿದ್ದು, 400ಕ್ಕಿಂತ ಹೆಚ್ಚು ಅಂಕಗಳನ್ನು 192 ವಿದ್ಯಾರ್ಥಿಗಳು ಗಳಿಸಿದ್ದು, ಕಾಲೇಜಿನ ನಿರಂತರ ಶೈಕ್ಷಣಿಕ ಶ್ರೇಷ್ಟತೆಯ ಸಾಕ್ಷಿಯಾಗುತ್ತದೆ. ಕಳೆದ ಬಾರಿ ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳು JIPMER, AIIMS Mangalagiri ಹಾಗೂ AIIMS Nagpur ಸೇರಿದಂತೆ ಹಲವು ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ, ಉಪನ್ಯಾಸಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವತಿಯಿಂದ ಭಾರೀ ಅಭಿನಂದನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರೇಷ್ಠತೆಯ ನಿರೀಕ್ಷೆಯಿದೆ.
