Categories
ಶಿವಮೊಗ್ಗ

ದೇಶದಲ್ಲೇ ಕುವೆಂಪು ವಿಶ್ವವಿದ್ಯಾಲಯ ಸಾಧನೆ

ದೇಶದಲ್ಲೇ ಕುವೆಂಪು ವಿಶ್ವವಿದ್ಯಾಲಯ ಸಾಧನೆ
– ದೇಶದಲ್ಲೇ 30ನೇ ರ‍್ಯಾಂಕ್‌ ಪಡೆದ ಮಲೆನಾಡ ವಿಶ್ವ ವಿದ್ಯಾಲಯ
– ಮ್ಯಾಗಜಿನ್ ಔಟ್ ಲುಕ್- ಐಕೇರ್ ಸಂಸ್ಥೆ ಬಿಡುಗಡೆ ಪಟ್ಟಿ

NAMMUR EXPRESS NEWS
ಶಂಕರಘಟ್ಟ: ಪ್ರತಿಷ್ಠಿತ ಮ್ಯಾಗಜಿನ್ ಔಟ್ ಲುಕ್- ಐಕೇರ್ ಸಂಸ್ಥೆ ಬಿಡುಗಡೆ ಮಾಡಿರುವ ದೇಶದ ಸಾರ್ವಜನಿಕ ವಿಶ್ವವಿದ್ಯಾಲಯದ ರ‍್ಯಾಂಕಿಂಗ್‌ನಲ್ಲಿ ಕುವೆಂಪು ವಿವಿ 30ನೇ ಶ್ರೇಣಿ ಪಡೆದು ಮಹತ್ವದ ಸಾಧನೆ ಮಾಡಿದೆ ಎಂದು ಕುವೆಂಪು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐದು ಮಾನದಂಡಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು 1000 ಅಂಕಗಳಿಗೆ ಮೌಲ್ಯಮಾಪನ ಮಾಡಿ ರ‍್ಯಾಂಕಿಂಗ್‌ ನೀಡಲಾಗಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ 400 ಅಂಕಗಳು, ಕೈಗಾರಿಕಾ ವಿನಿಮಯಕ್ಕೆ 200 ಅಂಕಗಳು, ಮೂಲ ಸೌಕರ್ಯಗಳಿಗೆ 150 ಅಂಕಗಳು, ಆಡಳಿತ ಮತ್ತು ವಿಸ್ತರಣೆಗೆ 150 ಅಂಕ ಹಾಗೂ ವೈವಿಧ್ಯತೆ ಚಟುವಟಿಕೆಗಳಿಗೆ 100 ಅಂಕಗಳನ್ನು ನಿಗದಿಗೊಳಿಸಲಾಗಿತ್ತು. ಕುವೆಂಪು ವಿವಿ ಒಟ್ಟು 862.25 ಅಂಕಗಳೊಂದಿಗೆ 30ನೇ ಸ್ಥಾನ ಪಡೆದಿದೆ. ಉಳಿದಂತೆ ಕರ್ನಾಟಕದ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ 6ನೇ ಸ್ಥಾನ ಪಡೆದಿದ್ದರೆ, ಮೈಸೂರು ವಿವಿ 8ನೇ ಸ್ಥಾನ ಮತ್ತು ಬೆಂಗಳೂರು ವಿವಿ 24ನೇ ಸ್ಥಾನ ಮತ್ತು ಮಂಗಳೂರು ವಿವಿ 44ನೇ ಸ್ಥಾನ ಪಡೆದು, ದೇಶದ ಟಾಪ್ 50ರೊಳಗೆ ಸ್ಥಾನ ಪಡೆದಿವೆ.
ಕುವೆಂಪು ವಿಶ್ವವಿದ್ಯಾಲಯವು ಕಳೆದ ತಿಂಗಳು ನ್ಯಾಕ್ ನಿಂದ ‘ಎ’ ಶ್ರೇಣಿ ಪಡೆದಿತ್ತು. ಈಗ ಔಟ್ ಲುಕ್- ಐಕೇರ್ ಸಂಸ್ಥೆ ರ‍್ಯಾಂಕಿಂಗ್‌ನಲ್ಲಿ 30ನೇ ಸ್ಥಾನ ಪಡೆದಿದೆ.

ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ

ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ಕೌನ್ಸಿಲಿಂಗ್ ಆ. 29 ಮತ್ತು 30ಕ್ಕೆ ನಿಗದಿಯಾಗಿದೆ. ವಿದ್ಯಾರ್ಥಿಗಳು ಆ. 22ರವರೆಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದಾಗಿದ ಎಂದು ಕುವೆಂಪು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.