Categories
ಶಿವಮೊಗ್ಗ

ಅನುಮಾನಾಸ್ಪದ ಬಾಕ್ಸಲ್ಲಿ ಇದ್ದಿದ್ದು ಬಿಳಿ ಪೌಡರ್!.ಇಟ್ಟಿದ್ದು ಯಾರು?

ಅನುಮಾನಾಸ್ಪದ ಬಾಕ್ಸಲ್ಲಿ ಇದ್ದಿದ್ದು ಬಿಳಿ ಪೌಡರ್!.ಇಟ್ಟಿದ್ದು ಯಾರು?
– ಎರಡು ಸಲ ಸ್ಫೋಟ: ಬಾಕ್ಸ್ ಇಟ್ಟ ಓರ್ವನ ಬಂಧನ
– ಶಿವಮೊಗ್ಗ ಬಾಕ್ಸ್ ಪ್ರಕರಣ ಇನ್ನು ಸಸ್ಪೆನ್ಸ್!

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್​ ಸ್ಥಳದಲ್ಲಿ ಪತ್ತೆಯಾದ ಎರಡು ಪೆಟ್ಟಿಗೆಗಳನ್ನು ಒಡೆಯಲು ಎರಡು ಬಾರಿ ಸ್ಫೋಟ ನಡೆಸಲಾಗಿದ್ದು ಕೊನೆಗೂ ಅದರಲ್ಲಿ ಬಿಳಿ ಪೌಡರ್ ಪತ್ತೆಯಾಗಿದೆ. ಭಾನುವಾರ ಗೋಣಿ ಚೀಲ ಬಿಗಿದ್ದಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಒತ್ತಡ ಹೇರಿ ಲಾಕ್ ಓಪನ್ ಮಾಡುವುದು ಸಹ ಅಪಾಯಕ್ಕೆ ದಾರಿಮಾಡಿಕೊಡುವ ಸಂಭವ ಇತ್ತು. ಹೀಗಾಗಿ ಬೀಗವನ್ನ ಒಡೆಯಲು ಸಣ್ಣ ಮಟ್ಟಿಗಿನ ಸ್ಫೋಟವನ್ನ ಮಾಡಲಾಯಿತು.ತಡರಾತ್ರಿ 2.40 ರ ಸುಮಾರಿಗೆ ಮೊದಲ ಸಲ ಸ್ಫೋಟಕವನ್ನ ಬಳಸಿ ಒಂದು ಟ್ರಂಕ್​ನ್ನ ಓಪನ್​ ಮಾಡಲಾಯ್ತು. ಅದರಲ್ಲಿ ಬಿಳಿ ಬಣ್ಣದ ಪೌಡರ್ ಪತ್ತೆಯಾಗಿತ್ತು. ಆನಂತರ 3.20 ರ ಹೊತ್ತಿಗೆ ಮತ್ತೊಂದು ಟ್ರಂಕ್​ನ್ನು ಕೂಡ ಸ್ಫೋಟಕ ಬಳಸಿ ಸಿಡಿಸಲಾಯ್ತು. ಅದರಲ್ಲಿಯು ಬಿಳಿ ಬಣ್ಣದ ಪೌಡರ್ ಪತ್ತೆಯಾಗಿತ್ತು. ಕೆಲವು ನ್ಯೂಸ್‌ ಪೇಪರ್‌ಗಳು, ಬಿಳಿ ಬಣ್ಣದ ಪೌಡರ್‌ ಇರುವ ಪ್ಯಾಕೆಟ್‌ ದೊರೆತಿದೆ.

ಅನಾಮಧೇಯ ಬಾಕ್ಸ್ ಪತ್ತೆಯಾಗಿದ್ದಂತೆ ಶಿವಮೊಗ್ಗದ ಜಯನಗರ ಪೊಲೀಸರು ತನಿಖೆ ನಡೆಸಿ ಈ ವೇಳೆ ಘಟನಾ ಸ್ಥಳಕ್ಕೆ ಓಮಿನಿ ಕಾರೊಂದು ಬಂದು ಹೋಗಿರೋ ಮಾಹಿತಿ ಪಡೆದು ಆರೋಪಿಯೊಬ್ಬ ತಿಪಟೂರಿನಲ್ಲಿ ಇರೋದು ಗೊತ್ತಾಗಿ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಎರಡು ಕಬ್ಬಿಣದ ಬಾಕ್ಸ್‌ನಲ್ಲಿ ಸ್ಫೋಟಕವಿಲ್ಲ ಎಂಬ ಸಮಾಧಾನಕರ ಮಾಹಿತಿ ಸಿಕ್ಕಿದೆ. ಆದರೆ, ಅದರಲ್ಲಿರೋ ಪೌಡರ್ ರೀತಿಯ ವಸ್ತು ಏನು? ಇಲ್ಲಿ ಇಟ್ಟಿದ್ದು ಏಕೆ ಎಂಬ ಕುತೂಹಲ ಮೂಡಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.