ತೀರ್ಥಹಳ್ಳಿ ಅಧಿಕಾರಿ ಕೊಲೆ: ಚಾಲಕ ಅರೆಸ್ಟ್!
– ಪದೇ ಪದೇ ಕರೆ… ಪೊಲೀಸರಿಗೆ ಅನುಮಾನ
– ತೀರ್ಥಹಳ್ಳಿಯಲ್ಲಿ ಅಧಿಕಾರಿಗೆ ಅಂತಿಮ ನಮನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ಅಧಿಕಾರಿ ಕೊಲೆ ಪ್ರಕರಣದಲ್ಲಿ ಓರ್ವನನ್ನು ಬೆಂಗಳೂರು ಸುಬ್ರಮಣ್ಯಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಸುಬ್ರಮಣ್ಯಪುರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರತಿಮಾರವರ ಬಳಿ ಡ್ರೈವರ್ ಕೆಲಸಕ್ಕಿದ್ದ ಕಿರಣ್ ಎನ್ನುವವನ್ನ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಪ್ರತಿಮಾರವರ ಜೊತೆಗೆ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತನನ್ನು ವಾರದ ಹಿಂದಷ್ಟೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದೇ ಕಾರಣಕ್ಕೆ ಕಿರಣ್ ಪ್ರತಿಮಾರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಈತನ ಹಿಂದೆ ಗಣಿ ಮಾಫಿಯಾ ಕೆಲಸ ಮಾಡಿದೆಯಾ ಎಂಬ ಅನುಮಾನ ಶುರುವಾಗಿದೆ.
ಕಿರಣ್‌ನನ್ನ ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸ್ತಿದ್ದಾರೆ. ಕಾರು ಚಾಲಕನಾಗಿದ್ದ ಕಿರಣ್ ನಿಂದ ಹಲವು ಕರೆಗಳು ಪ್ರತಿಮಾರಿಗೆ ಬಂದಿತ್ತು. ಇದರ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
ತೀರ್ಥಹಳ್ಳಿಯಲ್ಲಿ ಅಂತಿಮ ವಿಧಿ ವಿಧಾನ
ಪ್ರತಿಮಾರ ಮೃತದೇಹ ಭಾನುವಾರ ರಾತ್ರಿ ತೀರ್ಥಹಳ್ಳಿಗೆ ರವಾನೆಯಾಗಿದೆ.ರಾತ್ರಿ 10 ಗಂಟೆ ಸುಮಾರಿಗೆ ಮೃತಹದೇಹ ತೀರ್ಥಹಳ್ಳಿ ರವಾನೆ ಮಾಡಲಾಗಿದ್ದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಕುರುವಳ್ಳಿ ಸೇತುವೆ ಪಕ್ಕದಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.