Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ಅಕ್ಕನ ಸಾವಿನ ಸೇಡಿಗೆ ವ್ಯಕ್ತಿ ಕಗ್ಗೊಲೆ!
– ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲಿ ಭೀಕರ ಕೊಲೆ
– ತೀರ್ಥಹಳ್ಳಿ: ಮೇಗರವಳ್ಳಿಯ ಬಳಿ ಕಳ್ಳತನ
– ಶಿವಮೊಗ್ಗ: ಕಾರಲ್ಲೇ ಗಾಂಜಾ ಮಾರಾಟ: ಮೂವರು ಅರೆಸ್ಟ್

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ ಶಿವಶಂಕರ್ ವೈನ್ ಶಾಪ್ ಬಳಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನ‌ ಮಲ್ಲೇಶ್ ಯಾನೆ ಮಲ್ಲ(35) ಎಂದು ಗುರುತಿಸಲಾಗಿದೆ. ಚಿಕ್ಕಲ್ ನ ಫ್ಲೈ ಓವರ್ ಬಳಿಯ ಶಿವಶಂಕರ್ ವೈನ್ ಶಾಪ್ ಬಳಿಯ ಚಾನೆಲ್ ಏರಿಯಾದಲ್ಲಿ ಮಲ್ಲೇಶ್ ಬೈಕ್ ನಲ್ಲಿ ಬರುವಾಗ ಹಿಂಬದಿ ಬೈಕ್ ನಲ್ಲಿ ಬಂದ ಮೂವರು ಡಿಕ್ಕಿ ಹೊಡೆಸಿದ್ದಾರೆ. ಮಲ್ಲೇಶ್ ಕೆಳಗೆ ಬಿದ್ದಿದ್ದಾನೆ. ಮಲ್ಲೇಶ್ ಕೆಳಗೆ ಬಿದ್ದಿದ್ದನ್ನ‌ ನೋಡಿ ಸ್ಥಳೀಯರು ರಸ್ತೆ ಅಪಘಾತವೆಂದು ಘಟನಾ ಸ್ಥಳಕ್ಕೆ ಓಡಿದ್ದಾರೆ. ಆದರೆ ಗಲಾಟೆಗೆ ಮುಂದಾದ ಬೈಕ್ ಸವಾರರು ಮಲ್ಲರನ್ನ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಲ್ಲೇಶ್ ಧರ್ಮರಾಯನ ಕೇರಿಯ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅಕ್ಕನ ಸಾವಿಗೆ ಸಹೋದರರು ಸೇಡು ತೀರಿಸಿಕೊಂಡಿರುವ ಅನುಮಾನ ಸೃಷ್ಟಿಯಾಗಿದೆ.

ತೀರ್ಥಹಳ್ಳಿಯಲ್ಲಿ ಸರಣಿ ಕಳ್ಳತನ

ತೀರ್ಥಹಳ್ಳಿ ಮೇಗರವಳ್ಳಿಯ ವೆಂಕಟರಮಣ ದೇವಸ್ಥಾನಕ್ಕೆ ಕಳ್ಳರು ಕನ್ನ ಹಾಕಿದ್ದು ದೇವಸ್ಥಾನದಲ್ಲಿದ್ದ ದೇವರ ಮುಖವಾಡ ಕಾಣಿಕೆ ಹುಂಡಿ, ಗಂಟೆಗಳನ್ನು ಕದ್ದೊಯ್ದಿದ್ದಾರೆ. ಇನ್ನೊಂದೆಡೆ ಮುಂಡೊಳ್ಳಿ ಮೂರ್ತಿ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಡಿಸ್ಕವರ್ ಬೈಕ್ KA 51 HW 5351ಕದ್ದಿದ್ದಾರೆ. ಈ ಹಿಂದೆಯೂ ಇಲ್ಲಿ ಕಳ್ಳತನವಾಗಿತ್ತು.

ಕಾರಿನಲ್ಲೇ ಗಾಂಜಾ ಮಾರಾಟ: ಸಾಗರ, ಶಿವಮೊಗ್ಗದವರು ಅರೆಸ್ಟ್!

ಕಾರಿನಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ನ.13 ರಂದು ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ರಸ್ತೆಯ ತುಂಗಾ ನಾಲೆ ಸೇತುವೆ ಬಳಿ ನಡೆದಿದೆ. ಸಾಗರ ಪಟ್ಟಣದ ರಾಮನಗರದ ನಿವಾಸಿ ಅಲ್ತಾಫ್ ಯಾನೆ ಮಚ್ಚಿ (38) ಹಾಗೂ ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಇನಾಯತ್ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.ಆರೋಪಿಗಳಿಂದ 2,10,000 ರೂ. ಮೌಲ್ಯದ 5 ಕೆ.ಜಿ 250 ಗ್ರಾಂ ತೂಕದ ಒಣ ಗಾಂಜಾ, 2,50,000 ರೂ. ಮೌಲ್ಯದ ಸ್ಕೋಡಾ ಕಾರು, 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.