Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

– ಭದ್ರಾವತಿ: ತಂದೆ-ತಾಯಿಯಿಲ್ಲದ ಕೊರಗಿಗೆ ಯುವಕ ನೇಣಿಗೆ!
– ಸಾಗರ: ಬಸ್ ರಸ್ತೆ ಬಿಟ್ಟು ಕಂದಕಕ್ಕೆ ಇಳಿದ ಚಕ್ರ!
-ಭದ್ರಾವತಿ: ರೈಲು ಹರಿದು ಅಪರಿಚಿತ ವ್ಯಕ್ತಿ ಸಾವು
– ಶಿವಪುರ: ಅಪರಿಚಿತ ಯುವಕನ ಶವ ಪತ್ತೆ
– ಸೀರೆ ಚಕ್ರಕ್ಕೆ ಸಿಕ್ಕಿಕೊಳ್ತಿದೆ ಎಂದು ಮಾಂಗಲ್ಯ ದರೋಡೆ

NAMMUR EXPRESS NEWS
ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದ ಯುವಕ ವೀರೇಶ್ (21) ಗ್ರಾಮದ ದೇವೇಂದ್ರಪ್ಪ ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವೆಂದ್ರಪ್ಪರ ತೋಟದ ಅಂಚಿನಲ್ಲಿರುವ ಮಾವಿನ ಮರಕ್ಕೆ ಒಂದು ಬಿಳಿ ಪಂಚೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಮೃತ ಪಟ್ಟಿದ್ದು, ವೀರೇಶನು ತಂದೆ-ತಾಯಿ ಇಲ್ಲದ ಕೊರಗಿನಿಂದ ಜಿಗುಪ್ಪೆಗೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.

ರಸ್ತೆ ಬಿಟ್ಟು ಕಂದಕಕ್ಕೆ ಇಳಿದ ಬಸ್!

ಸಿಗಂದೂರು : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರಿನಿಂದ ಸಾಗರಕ್ಕೆ ಬರುತ್ತಿದ್ದ ಸರ್ಕಾರಿ ಬಸ್​ ವೊಂದು ಸ್ವಲ್ಪದರಲ್ಲಿಯೇ ಅಪಘಾತಕ್ಕೀಡಾಡುವುದು ತಪ್ಪಿದೆ. ಈ ಘಟನೆ ಚೆನ್ನಗೊಂಡ ಗ್ರಾಮದ ಬಳಿ ನಡೆದಿದೆ. ಚೆನ್ನಗೊಂಡ ಗ್ರಾಮದ ಸಮೀಪ ಸಿಗಂದೂರಿನಿಂದ ಸಾಗರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಕಂದಕಕ್ಕೆ ಬೀಳುವ ಅಪಾಯ ಎದುರಾಗಿತ್ತು. ಅದೃಷ್ಟವಶಾತ್, ಸ್ವಲ್ಪದರಲ್ಲಿ ಅಪಾಯ ತಪ್ಪಿದೆ.

ಸೀರೆ ಚಕ್ರಕ್ಕೆ ಸಿಕ್ಕಿಕೊಳ್ತಿದೆ ಎಂದು ಮಾಂಗಲ್ಯ ದರೋಡೆ

ಶಿವಮೊಗ್ಗ: ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಮಹಿಳೆ ಅವರ ಸಂಬಂಧಿ ಜೊತೆ ಎ.ಪಿ.ಎಂ.ಸಿ ಮುಂದಿನ ಕಟ್ಟೆಸುಬ್ಬಣ್ಣ, ಸರ್ಕಲ್ ಹತ್ತಿರ ಇರುವ ಹಂಪ್ ಹತ್ತಿರ ಬರುತ್ತಿದ್ದಾಗ, ಹಿಂದಿನಿಂದ ಬಂದ ಇಬ್ಬರು, ಮಹಿಳೆಗೆ ನಿಮ್ಮ ಸೀರೆ ಬೈಕ್‌ ನ ಚಕ್ರಕ್ಕಾ ಸಿಲುಕಿದೆ ಎಂದು ಹೇಳಿದ್ದಾರೆ. ತಕ್ಷಣವೇ ಮಹಿಳೆಯ ಸಂಬಂಧ ಬೈಕ್​ ಸ್ಲೋ ಮಾಡಿದ್ದಾರೆ. ಅಷ್ಟರಲ್ಲಿ ಹಿಂದಿನಿಂದ ಬಂದ ಬೈಕ್​ನಲ್ಲಿದ್ದವನು ಮಹಿಳೆಯ ಕುತ್ತಿಗೆಯಲ್ಲಿದ್ದ 75-80 ಗ್ರಾಂ ತೂಕದ ಅಂದಾಜು ರೂ.2,65,000/- ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಭದ್ರಾವತಿ : ರೈಲು ಹರಿದು ಅಪರಿಚಿತ ವ್ಯಕ್ತಿ ಸಾವು

ಅ.25ರಂದು ಭದ್ರಾವತಿ ರೈಲು ನಿಲ್ದಾಣದಿಂದ ಹೊರಟ ರೈಲುಗಾಡಿ 20651 ಕಿ.ಮೀ ನಂ 59/700-800 ರಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯ ಮೇಲೆ ಹರಿದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ವಾರಸುದಾರರಿಗೆ ಸಂಬಂಧಿಸಿದಂತೆ ಪ್ರಕಟಣೆ ನೀಡಲಾಗಿದೆ.ಮೃತನು ಸುಮಾರು 4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಅರ್ಧ ಇಂಚು ಕಪ್ಪು ಮೀಸೆ ಇರುತ್ತದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಅದರ ಮೇಲೆ ಪ್ಲಸ್ ಆಕಾರದ ನೀಲಿ ಕಲರ್‍ನ ಗೆರೆ ಇರುತ್ತದೆ. ಬಿಳಿ ಬಣ್ಣದ ಕ್ರಾಸ್ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹದು ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಶಿವಪುರ : ಅಪರಿಚಿತ ಯುವಕನ ಶವ ಪತ್ತೆ

ಶಿವಪುರ-ಬೀರೂರು ರೈಲು ನಿಲ್ದಾಣದ ಮಧ್ಯೆ ಕಿ.ಮೀ 02-900-03/000 ರಲ್ಲಿ ಸುಮಾರು 22 ವರ್ಷ ವಯಸ್ಸಿನ ಅಪರಿಚಿತ ಯುವಕನು ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಬೀರೂರಿಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತನು ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಕೂದಲು, ಸುಮಾರು 1 ಇಂಚು ಉದ್ದದ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್, ಆಕಾಶ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ.

ಮಲೆನಾಡು, ಕರಾವಳಿ ಭಾಗದ ಅನೇಕ ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಈ ಕಾರಣಕ್ಕಾಗಿ ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ. ಈ ಕುರಿತು ಸರ್ಕಾರ ಮಧ್ಯಪ್ರವೇಶಿಸುವುದು ಅವಶ್ಯ.

[embedyt] https://www.youtube.com/watch?v=653JxL6-kG0%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.