ಲೀಡರ್ ಅವಾರ್ಡ್ಸ್ ತರಬೇತಿಗೆ ತೀರ್ಥಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು
– ಮಣಿಪಾಲದಲ್ಲಿ ರೋಟರಿ ವತಿಯಿಂದ ನಡೆದ ಕಾರ್ಯಕ್ರಮ
– 7 ಮಂದಿ ವಿದ್ಯಾರ್ಥಿಗಳು ಭಾಗಿ: ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ: ರೋಟರಿ ಯೂಥ್ ಲೀಡರ್ ರ್ಶಿಪ್ ಅವಾರ್ಡ್ ತರಬೇತಿಯಲ್ಲಿ ತೀರ್ಥಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು. ಅ.22ರಂದು ಟಿ ಎಮ್ ಎ ಪೈ ಸಭಾಂಗಣ ಮಣಿಪಾಲ ದಲ್ಲಿ ನಡೆದ “ರೋಟರಿ ಯುವ ಮುಂದಾಳತ್ವ ಅವಾರ್ಡ್ “ತರಬೇತಿ ಶಿಬಿರದಲ್ಲಿ ತೀರ್ಥಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಏಳು ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ರೋಟರಿ ಜಿಲ್ಲೆ 3182 ಇವರು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಯುವಕರು ಮತ್ತು ರೋಟರಿ ಸದಸ್ಯರಿಗೆ ಸೃಜನಶೀಲ ಮುಂದಾಳತ್ವ, ಮಾತಿನಲ್ಲಿ ಸ್ಪಷ್ಟತೆ, ಸಮಸ್ಯೆಗಳನ್ನು ಬಗೆಹರಿಸುವುದು, ಸಮುದಾಯ ಸೇವೆಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವುದು ಮತ್ತು ವಿಶ್ವ ಮಾನವತೆಯೊಂದಿಗೆ ಹೇಗೆ ಭಾಗಿಯಾಗಬೇಕು ಎಂದು ಒಂದು ದಿನದ ಶಿಬಿರವನ್ನ ಆಯೋಜಿಸಲಾಗಿತ್ತು.
ಸುಭಾಷ್ ಬಂಗೇರ, ಸಾಫ್ಟ್ ಸ್ಕಿಲ್ ಟ್ರೈನರ್, ಪ್ರೊ.ಶ್ರುತಿ ಮತ್ತು ಜೇಸಿ ರಾಜೇಂದ್ರ ಭಟ್ ಇವರು ತರಬೇತಿಯನ್ನು ನಡೆಸಿಕೊಟ್ಟರು .ರೊ ಮಂಜುನಾಥ್ ಎಂ, ಆರ್, ಕಾರ್ಯದರ್ಶಿ ರೋಟರಿ ಕ್ಲಬ್ ತೀರ್ಥಹಳ್ಳಿ ಮತ್ತು ತೀರ್ಥಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಕು.ಕವನ,ಕು.ಮಂಜುಳ,ಕು.ಆತ್ಮಿ,ಕು.ಸ್ವೀಕ್ರತಿ, ಮಿಲನ್, ಪೃಥ್ವಿ ಮತ್ತು ಮುರಳಿ ತರಬೇತಿಯನ್ನು ಪಡೆದು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು ಹಾಗೂ ಉತ್ತಮ ತರಬೇತಿಯಲ್ಲಿ ಭಾಗವಹಿಸಿದ್ದಕ್ಕೆ ಕೃತಜ್ಞತೆಯನ್ನು ತಿಳಿಸಿದರು. ಧರ್ಮಣ್ಣ ಎಮ್ ಟಿ, ಪ್ರಾಂಶುಪಾಲರು, ಸ .ಪ್ರ.ಕಾಲೇಜು ತೀರ್ಥಹಳ್ಳಿ ಇವರು ರೋಟರಿ ಕ್ಲಬ್ ತೀರ್ಥಹಳ್ಳಿಯ ರೊ ಭರತ್ ಕುಮಾರ್ ಕೊಡ್ಲು, ರೊ ಕೆ ಪಿ ಎಸ್ ಸ್ವಾಮಿ, ರೊ ಕೆ ಟಿ ಚಂದ್ರಪ್ಪ ಮತ್ತು ರೊ ಮಂಜುನಾಥ್ ಎಂ ಆರ್ ಇವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮೇಘರಾಜ್ , ಸಂಯೋಜಕರು ಸಹಕರಿಸಿದರು.