ಯೂಟ್ಯೂಬಿನಲ್ಲೇ ಕ್ಲಿಕ್ ಆಯ್ತು ಟ್ರಕ್ ಡ್ರೈವರ್ ಲೈಫ್!
– ಟ್ರಕ್ ಚಾಲಕ ರಾಜೇಶ್ ಇದೀಗ ಬಿಎಂಡಬ್ಲ್ಯು ಮಾಲೀಕ
– ವಾ!!. ಸಾಧನೆ ಅಂದ್ರೆ ಹೀಗಿರಬೇಕು ಗುರು!
NAMMUR EXPRESS NEWS
ರಾಜೇಶ್ ಜಾರ್ಖಂಡ್ನಲ್ಲಿ ಟ್ರಕ್ ಚಾಲಕನಾಗಿದ್ದ ವ್ಯಕ್ತಿ, ಅನಿರೀಕ್ಷಿತವಾಗಿ ಪ್ರಪಂಚದಾದ್ಯಂತ ಜನಪ್ರಿಯ ಯೂಟ್ಯೂಬರ್ ಆಗಿ ಮಿಂಚಿದ್ದರು. ಇದೀಗ ಅದೇ ವ್ಯಕ್ತಿ ರಾಜೇಶ್, ಬಿಎಂಡಬ್ಲ್ಯು ಸ್ಪೋರ್ಟ್ಸ್ ಕಾರನ್ನು ಖರೀದಿಸಲು ತಯಾರಾಗಿದ್ದಾರೆ.
ಹೌದು ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ಅವರ ಯೂಟ್ಯೂಬ್ ಚಾನೆಲ್, ಆರ್ ರಾಜೇಶ್ ವ್ಲಾಗ್, 1.86 ಮಿಲಿಯನಿಗಿಂತ ಹೆಚ್ಚು ವೀಕ್ಷಕರನ್ನು ಹೊಂದಿದೆ.
ಉತ್ಸಾಹ ಮತ್ತು ಪರಿಶ್ರಮ ಖಂಡಿತವಾಗಿಯೂ ಯಶಸ್ಸಿಗೆ ದಾರಿ ಎಂಬುದಕ್ಕೆ ರಾಜೇಶ್ ಅವರ ಕಥೆ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ. ಟ್ರಕ್ಗಳನ್ನು ಚಾಲನೆ ಮಾಡುವುದರಿಂದ ಹಿಡಿದು ಕೈಯಲ್ಲಿ ಕ್ಯಾಮೆರಾ ಹಿಡಿದು ಯೂಟ್ಯೂಬ್ ವಿಡಿಯೋ ಮಾಡುವವರೆಗೆ, ಅವರು ತಮ್ಮ ಸಾಮರ್ಥ್ಯವನ್ನು ಬಿಂಬಿಸಿಕೊಂಡಿದ್ದಾರೆ.
ತಮ್ಮ ಕುಕ್ಕಿಂಗ್ ವೀಡಿಯೋಗಳಿಂದ ಹಿಡಿದು ಎಲ್ಲಾ ರೀತಿಯ ವಿಡಿಯೋಗಳಿಂದ ತಿಂಗಳಿಗೆ 10 ಲಕ್ಷ ಸಂಪಾದಿಸುತ್ತಾರೆಂದು ತಿಳಿಸಿದ್ದು, ಯುಟ್ಯೂಬರ್ ಆಗಿ ಬದಲಾದ ಟ್ರಕ್ ಚಾಲಕ ಜಾರ್ಖಂಡ್ನ ರಾಜೇಶ್ ರೇವಾನಿ ಬಗ್ಗೆ ಬಹುತೇಕರಿಗೆ ಗೊತ್ತು!. ಸಾಮಾಜಿಕ ಜಾಲತಾಣಗಳಲ್ಲಿ ಈಜಾಡುವ ಬಹುತೇಕರು ಇವರ ವೀಡಿಯೋಗಳನ್ನು ನೋಡಿಯೇ ನೋಡಿರುತ್ತೀರಾ? ಅಲ್ಲದೇ ರಸ್ತೆ ಬದಿಯ ಅವರ ಕುಕ್ಕಿಂಗ್ ವೀಡಿಯೋವನ್ನು ಇಷ್ಟಪಟ್ಟಿರುತ್ತೀರಿ.
ಆದರೆ ಅವರೀಗ ತಮ್ಮ ಅದೇ ಯೂಟ್ಯೂಬ್ ಆದಾಯದ ಮೂಲಕ ಬಿಎಂಡಬ್ಲ್ಯು ಸ್ಪೋರ್ಟ್ಸ್ ಕಾರನ್ನು ಖರೀದಿಸಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಟ್ರಕ್ ಚಾಲಕರೆಂದರೆ ಅವರ ಸಂಬಳ ತಿಂಗಳಿಗೆ 20 ರಿಂದ 30 ಸಾವಿರದವರೆಗೆ ಇರಬಹುದು. ಆದರೆ ಟ್ರಕ್ ಚಾಲನೆಯ ಹೊರತಾಗಿ ತಾವು ಮಾಡುವ ಈ ಯೂಟ್ಯೂಬ್ ವೀಡಿಯೋಗಳ ಸೈಡ್ ಬ್ಯುಸಿನೆಸ್ನಿಂದ ಇವರು ಗಳಿಸ್ತಿರೋದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗೂ ಅಧಿಕವಂತೆ. ಅಚ್ಚರಿ ಎನಿಸಿದರು ಇದು ನಿಜವಾದ ಸಂಗತಿಯಾಗಿದೆ. ಸುಮಾರು ಎರಡು ದಶಕಗಳಿಂದ ಭಾರತದ ರಸ್ತೆಗಳಲ್ಲಿ ದೇಶದ ಉದ್ದಗಲಕ್ಕೂ ಟ್ರಕ್ ಚಾಲನೆ ಮಾಡಿರುವ ರಾಜೇಶ್ ರೇವಾನಿ ತಮ್ಮ ವೃತ್ತಿಗಿಂತ ತಮ್ಮ ಹವ್ಯಾಸವಾದ ಯೂಟ್ಯೂಬ್ ವೀಡಿಯೋಗೆ ಸಖತ್ ಫೇಮಸ್ ಆಗಿದ್ದಾರೆ.
