Categories
ಕ್ರಿಕೆಟ್ ಕ್ರೀಡಾ ಸುದ್ದಿ

ರಣರೋಚಕ ಪಂದ್ಯದಲ್ಲಿ ಚೆನ್ನೈ ಫಿನೀಶ್ ಆರ್‌ಸಿಬಿ‌ಗೆ ಥ್ರಿಲ್ಲಿಂಗ್ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ರಣರೋಚಕ ಪಂದ್ಯದಲ್ಲಿ ಚೆನ್ನೈ ಫಿನೀಶ್ ಆರ್‌ಸಿಬಿ‌ಗೆ ಥ್ರಿಲ್ಲಿಂಗ್ ಜಯ
* ಕೊಹ್ಲಿ ದಾಖಲೆಗಳ ಸುರಿಮಳೆ,ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಟಾಪರ್

NAMMMUR EXPRESS NEWS
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಓವರ್‌ನಲ್ಲಿ ರೋಚಕ ಎರಡು ರನ್‌ಗಳಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಸಿಎಸ್ ಕೆ ತಂಡಕ್ಕೆ ಪಂದ್ಯವನ್ನು ಗೆಲ್ಲಲು 214 ರನ್ ಗಳ ಸವಾಲು ನೀಡಿತು.ಆರ್‌ಸಿಬಿ ಪರವಾಗಿ ಗಮನ ಸೆಳೆದಿದ್ದು ತಂಡದ ಮಧ್ಯಮ ಕ್ರಮಾಂಕದ, ವಿಂಡೀಸ್ ಆಟಗಾರ ರೊಮಾರಿಯೊ ಶೆಫರ್ಡ್. ಇನಿಂಗ್ಸ್ ನ 18ನೇ ಓವರ್ ನಲ್ಲಿ ತಂಡವು ಐದು ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಕಾಲಿಟ್ಟಿದ್ದ ಶೆಪರ್ಡ್, ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ ಗಳನ್ನು ತೀವ್ರವಾಗಿ ದಂಡಿಸಿದರು. ಕೇವಲ 14 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ಅವರು, ತಂಡದ ಮೊತ್ತವು 213 ರನ್ ಗಳಿಗೆ ಏರಿಸಲು ಸಹಾಯ ಮಾಡಿದರು. 6ನೇ ವಿಕೆಟ್‌ಗೆ ಅವರು ಟೀಮ್ ಡೇವಿಡ್ ಜೊತೆಗೆ ನೀಡಿದ 56 ರನ್ ಗಳ ಮುರಿಯದ ಜೊತೆಯಾಟ ಅದ್ಭುತವಾಗಿತ್ತು.ಆರಂಭಿಕರಾದ ಜಾಕೋಬ್ ಬೆಥೆಲ್ (55 ರನ್, 33 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (62 ರನ್, 33 ಎಸೆತ, 5 ಬೌಂಡರಿ, 5 ಸಿಕ್ಸರ್) ಮೊದಲ ವಿಕೆಟ್ ಗೆ 97 ರನ್ ಗಳ ಜೊತೆಯಾಟ ನೀಡಿ ತಂಡದ ಇನ್ನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಬೆಥೆಲ್ ಅವರು ವಿಕೆಟ್ ಒಪ್ಪಿಸಿದರೂ ಕೊಹ್ಲಿ ತಂಡಕ್ಕೆ ರನ್ ಹೊಳೆ ಹರಿಸುತ್ತಾ ಇನಿಂಗ್ಸ್ ಮುನ್ನಡೆಸಿದರು. ಆದರೆ, ಮಧ್ಯಮ ಕ್ರಮಾಂಕದಿಂದ ದೊಡ್ಡ ಮಟ್ಟದ ಸಾಥ್ ಸಿಕ್ಕಲಿಲ್ಲ. ಪಡಿಕ್ಕಲ್ (17), ನಾಯಕ ಪಾಟಿದಾರ್ (11) ಜಿತೇಶ್ ಶರ್ಮಾ (7) ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ, ಇನಿಂಗ್ಸ್ ಕೊನೆಯೆರಡು ಓವರ್ ಗಳಲ್ಲಿ ಜೊತೆಯಾದ ಟಿಮ್ ಡೇವಿಡ್ (ಅಜೇಯ 2) ಹಾಗೂ ರೊಮಾರಿಯೊ ಶೆಪರ್ಡ್ (53 ರನ್, 14 ಎಸೆತ, 4 ಬೌಂಡರಿ, 6 ಸಿಕ್ಸರ್) ತಂಡದ ಮೊತ್ತ 200 ರನ್ ಗಡಿ ದಾಟಲು ನೆರವಾದರು.
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಐಪಿಎಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ನಂಬಿ ಮೈದಾನಕ್ಕೆ ಆಗಮಿಸದೇ ಮನೆಯಲ್ಲೇ ಕುಳಿತ ಅಭಿಮಾನಿಗಳು ಕೈ ಕೈ ಹಿಚಕಿಕೊಂಡರು. ಏಕೆಂದರೆ ವರುಣನ ಬಿಡುವಿನಿಂದ ಆರ್‌ಸಿಬಿ ತಂಡ ಪ್ರವಾಸಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅದ್ಬುತ ಆಟವಾಡಿತು. ಮಳೆಯ ಭೀತಿಯಲ್ಲೂ ಮೈದಾನಕ್ಕೆ ಬಂದ 25 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕೊಹ್ಲಿ, ಬಾಥೆಲ್, ಶೆಪರ್ಡ್ ಆಟವನ್ನು ಕಣ್ತುಂಬಿಕೊಂಡರು.
ಚಿನ್ನಸ್ವಾಮಿಯಲ್ಲಿ ಇಲ್ಲಿನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಗೆದ್ದ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ತಂಡ, ಕೊಹ್ಲಿ ಮತ್ತು ಜಾಕೋಬ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆಯಿತು. ಖಲೀಲ್‌ ಅಹ್ಮದ್‌ ಎಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್‌ ಫೋರ್‌ ಸಿಡಿಸಿದ ಜಾಕೋಬ್‌, ಬ್ಯಾಟಿಂಗ್‌ ರಸದೌತಣವಿತ್ತರು.

* ಗೇಲ್‌ ದಾಖಲೆ ಮುರಿದ ಕೊಹ್ಲಿ
ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ಸಿಕ್ಸರ್‌ ಸಿಡಿಸಿದ ವಿರಾಟ್‌ ಕೊಹ್ಲಿ(62; 33 ಎಸೆತ, 5 ಫೋರ್‌, 5 ಸಿಕ್ಸರ್‌), ಟಿ20 ಮಾದರಿಯಲ್ಲಿ ಒಂದೇ ತಾಣದಲ್ಲಿ ಅತ್ಯಧಿಕ ಸಿಕ್ಸರ್‌ ದಾಖಲಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. 3 ಸಿಕ್ಸರ್‌ ಸಿಡಿಸಿದ ವೇಳೆ ಅವರು, ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಸ್‌ ಗೇಲ್‌ ದಾಖಲಿಸಿದ್ದ 151 ಸಿಕ್ಸರ್‌ಗಳ ದಾಖಲೆಯನ್ನು ಅಳಿಸಿ ಹಾಕಿದರು. ಸದ್ಯ ಕೊಹ್ಲಿ ಬೆಂಗಳೂರಿನಲ್ಲಿ 154 ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ಮಧ್ಯೆ, ಕೊಹ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ಅರ್ಧ ಶತಕ ಗಳಿಸಿದ್ದ ಡೇವಿಡ್‌ ವಾರ್ನರ್‌(61) ಅವರ ದಾಖಲೆಯನ್ನು ಸರಿಗಟ್ಟಿದರು. ಚೆನ್ನೈ ವಿರುದ್ಧ 62 ರನ್‌ ಗಳಿಸಿದ ಕೊಹ್ಲಿ, ಐಪಿಎಲ್‌ನಲ್ಲಿ ಒಟ್ಟಾರೆ 62 ಅರ್ಧ ಶತಕ ಹಾಗೂ 8 ಶತಕ ಗಳಿಸಿದ್ದಾರೆ.

* 2ನೇ ಅತಿ ವೇಗದ ಅರ್ಧ ಶತಕ
ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ ರೊಮಾರಿಯೊ ಶೆಫರ್ಡ್‌, ಐಪಿಎಲ್‌ ಇತಿಹಾಸದಲ್ಲಿ 2ನೇ ಜಂಟಿ ಅತಿ ವೇಗದ ಅರ್ಧ ಶತಕ ಗಳಿಸಿದರು. ಚೆನ್ನೈ ವಿರುದ್ಧ ಕೇವಲ 14 ಎಸೆತಗಳಲ್ಲಿ4 ಬೌಂಡರಿ, 6 ಸಿಕ್ಸರ್‌ ಒಳಗೊಂಡ ಅಜೇಯ 53 ರನ್‌ ಗಳಿಸಿ ಈ ಸಾಧನೆ ಮಾಡಿದರು. 2023ರಲ್ಲಿ ರಾಜಸ್ಥಾನ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್‌, ಕೆಕೆಆರ್‌ ವಿರುದ್ಧ 13 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಆದರೆ 30 ವರ್ಷದ ಶೆಫರ್ಡ್‌ ಅವರ ಅರ್ಧ ಶತಕ ಹಾಲಿ ಟೂರ್ನಿಯಲ್ಲಿ ದಾಖಲಾದ ಅತಿ ವೇಗದ ಅರ್ಧ ಶತಕವಾಗಿದೆ.
ಖಲೀಲ್‌ ಸೇರಿದಂತೆ ನಿರಾಶಾದಾಯಕ ಬೌಲಿಂಗ್‌ ಪರ್ದರ್ಶಿಸಿದ ಚೆನ್ನೈ, ಆರ್‌ಸಿಬಿ ಎದುರಿನ ಪಂದ್ಯ ಸೇರಿದಂತೆ 11 ಪಂದ್ಯಗಳಲ್ಲಿ 2ನೇ ಬಾರಿ ಪವರ್‌ ಪ್ಲೇ ಅವಧಿಯಲ್ಲಿವಿಕೆಟ್‌ ಪಡೆಯಲು ವಿಫಲಗೊಂಡಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬಯಿ ವಿರುದ್ಧ ಇಂತಹ ಸ್ಥಿತಿ ಎದುರಿಸಿತ್ತು. 29 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಕೊಹ್ಲಿ ಹಾಲಿ ಟೂರ್ನಿಯಲ್ಲಿ7ನೇ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದರು. 2016ರಲ್ಲಿ ಆರ್‌ಸಿಬಿ ಪರ ಸಸತ ನಾಲ್ಕು ಬಾರಿ ಅರ್ಧಶತಕಕ್ಕೂ ಅಧಿಕ ರನ್‌ ಗಳಿಸಿದ್ದ ಕೊಹ್ಲಿ, ಪ್ರಸಕ್ತ ಸಾಲಿನಲ್ಲಿ ಹಿಂದಿನ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.