Categories
ಶೃಂಗೇರಿ

ಕಿಗ್ಗಾ ಋಷ್ಯಶೃಂಗೇಶ್ವರ ಮಹಾರಥೋತ್ಸವ

ಕಿಗ್ಗಾ ಋಷ್ಯಶೃಂಗೇಶ್ವರ ಮಹಾರಥೋತ್ಸವ

* ಮಳೆ ದೇವರೆಂದೆ ಜಗತ್ಪ್ರಸಿದ್ಧಿಗೊಂಡ ಶ್ರೀ ಋಷ್ಯಶೃಂಗೇಶ್ವರ
* ತಾಲೂಕಿನಲ್ಲೇ ಈ ಜಾತ್ರೆ ಬಲು ಜೋರು

NAMMUR EXPRESS NEWS
ಶೃಂಗೇರಿ: ಮಳೆ ದೇವರೆಂದೇ ಜಗತ್ಪ್ರಸಿದ್ಧಿಗೊಂಡ ತಾಲೂಕಿನ ಕಿಗ್ಗಾ ಶ್ರೀಋಷ್ಯಶೃಂಗೇಶ್ವರ ಸ್ವಾಮಿಯ ವಾರ್ಷಿಕ ಮಹಾರಥೋತ್ಸವ ನಾಳೆ ನಡೆಯಲಿದೆ.
ಇತಿಹಾಸ ಪ್ರಸಿದ್ಧ ಈ ದೇವಸ್ಥಾನದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಯನ್ನು ಮಳೆ ದೇವರೆಂದೆ ಸ್ಥಳೀಯರು ಹಾಗೂ ರಾಜ್ಯ,ದೇಶದಾದ್ಯಂತ ಭಕ್ತರು ನಂಬಿದ್ದಾರೆ. ಅದರಂತೆಯೇ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದು,ಮಹಾರಥೋತ್ಸವವೂ ನಡೆಯುತ್ತಿದೆ. ಮಾ.31 ರಿಂದ ಜಾತ್ರಾ ಧ್ವಜಾರೋಹಣ ನಡೆದಿದ್ದು ಏ.5 ರಂದು ಮಹಾರಥೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದು, ವಿಜೃಂಭಣೆಯಿಂದ ನಡೆಯಲಿದೆ. ದಿನಾಂಕ 05:04:2025 ರ ಶನಿವಾರ ಬೆಳಿಗ್ಗೆ 9:55 ಕ್ಕೆ ರಥೋತ್ಸವ ನಡೆಯಲಿದ್ದು ರಾತ್ರಿ 9:30 ಕ್ಕೆ ವಾಪಾಸ್ಸು ಎಳೆಯಲಾಗುವುದು.ರಥೋತ್ಸವದ ಸಲುವಾಗಿ ಬ್ರಹ್ಮರಥ ಸಿದ್ಧ ಮಾಡುವುದು,ಸುಣ್ಣಬಣ್ಣ,ದೇವಸ್ಥಾನದ ಅಲಂಕಾರ ಸೇರಿದಂತೆ ರಥಬೀದಿ ಸ್ವಚ್ಛತೆ ಕೆಲಸಗಳು ಪೂರ್ಣಗೊಂಡಿದೆ.

ಕಿಗ್ಗಾ ಜಾತ್ರೆಯೆಂದರೆ ಬಲು ಜೋರು !!
ಜಗತ್ಪ್ರಸಿದ್ಧ ಋಷ್ಯಶೃಂಗ ಜಾತ್ರಾ ಮಹಾರಥೋತ್ಸವವು ಬಲು ವಿಜೃಂಭಣೆಯಿಂದ ನಡೆಯಲಿದ್ದು ರಥೋತ್ಸವದ ನಂತರ ಕಿಗ್ಗಾ ಸೀಮೆಗೆ ಸೇರಿದ ಊರುಗಳಲ್ಲಿ ಜಾತ್ರೆಯ ಹಬ್ಬವು ನಡೆಯಲಿದೆ. ಬೆಳಿಗ್ಗೆ ಸ್ವಲ್ಪ ದೂರದವರೆಗೆ ಎಳೆದಿಡುವ ಬ್ರಹ್ಮರಥವನ್ನು ರಾತ್ರಿ ಭಕ್ತಾಧಿಗಳು ಪೂರ್ಣವಾಗಿ ರಾಜಾಬೀದಿಗಳಲ್ಲಿ ಎಳೆದು ಸ್ವಾಮಿಯನ್ನು ದೇವಾಲಯಕ್ಕೆ ಹಿಂತಿರುಗಿಸಲಾಗುವುದು.ನಂತರ ತಮ್ಮ ಮನೆಗಳಲ್ಲಿ ಹಬ್ಬದೂಟ ಮಾಡಿ ಸಂಬಂಧಿಕರು,ಸ್ನೇಹಿತರೊಡನೆ ಊಟ ಮಾಡುತ್ತಾರೆ. ಊರ ಜಾತ್ರೆಗೆ ಹೊರ ಊರಗಳಲ್ಲಿ ಕೆಲಸದ ನಿಮಿತ್ತ ನೆಲಸಿರುವ ಎಲ್ಲರೂ ಬಂದು ಊರಿನ ದೇವರ ದರ್ಶನ ಮಾಡಿ ನಮಸ್ಕರಿಸಿ ಹೋಗುವುದು ವಾಡಿಕೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.