ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ..!!
– ಒಂದು ವಾರಗಳ ಕಾಲ ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ.
– 21 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಪೋಷಣೆ
NAMMUR EXPRESS NEWS
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತದ ಪರಿಚಲನೆಯಾ ಗಿದ್ದು, ರಾಜ್ಯದ 21 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರದ ಎರಡು ಭಾಗಗಳಲ್ಲಿ ವಾಯುಭಾರ ಕುಸಿತದಿಂದ ಸ್ಪಷ್ಟ ಚಂಡಮಾರುತದ ಪರಿಚಲನೆಯುಂಟಾಗಿದ್ದು, ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ.
ರಾಜ್ಯದಲ್ಲಿ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿತ್ತು, ಈ ಮಧ್ಯೆ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಸಾಧಾರಣದಿಂದ ಭಾರೀ ಮಳೆ ಅಬ್ಬರಿಸಲಿದ್ದು, ಪೂರ್ವ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ. ಕೆಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ. ಈ ವರ್ಷ ಈವರೆಗೆ ಪೂರ್ವ ಮುಂಗಾರು ಪೈಕಿ ಮುಂದಿನ ಮೂರು ದಿನ ಅಬ್ಬರಿಸುವ ಮಳೆ, ಅತ್ಯಧಿಕ ಮಳೆ ಎಂದು ಅಂದಾಜಿಸಲಾಗಿದೆ. 3.6 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಬಿರುಗಾಳಿ: ಲಕ್ಷದ್ವೀಪದ ಕಡೆಗಿನ ಸಮುದ್ರದಲ್ಲಿ 0.9 ಕಿ.ಮೀ ಎತ್ರದಲ್ಲಿ ಹಾಗೂ ಕೊಮೆರಿಯನ್ ಪ್ರದೇಶದಲ್ಲಿ 3.6 ಕಿ.ಮೀ ಎತ್ರದಲ್ಲಿ ಚಂಡಮಾರುತ ಗಾಳಿ ನಿರ್ಮಾಣವಾಗಿ ಚಂಡಮಾರುತವಾಗಿ ಬದಲಾಗಿದೆ. ಈ ಹಿನ್ನೆಲೆ ದಕ್ಷಿಣ ಭಾರತದ ಮೂರರಿಂದ ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದಲ್ಲೂ ಸೈಕ್ಲೋನ್ ಪರಿಣಾಮ ಅತ್ಯಧಿಕ ಪ್ರಮಾಣದಲ್ಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಳನಾಡಿನ ಜಿಲ್ಲೆಗಳಲ್ಲಿ ಒಂದೇ ದಿನದಲ್ಲಿ ಭಾರೀ ಮಳೆಯಾಗಲಿದ್ದು,ಈ ಹಿನ್ನೆಲೆ 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಶಿವಮೊಗ್ಗ ಸೇರಿ ಕೆಲವೆಡೆ ಆಲಿಕಲ್ಲು ಸಹಿತ ವ್ಯಾಪಕ ಮಳೆ ಸುರಿಯಲಿದೆ.