ಶೃಂಗೇರಿ ಶಾಸಕ ರಾಜೇಗೌಡ ಪುತ್ರ ವಿವಾಹ
– ಮಲೆನಾಡು ಸೇರಿ ರಾಜ್ಯದ ವಿವಿಧ ಕ್ಷೇತ್ರದ ಗಣ್ಯರ ಶುಭಾಶಯ
– ಸರ್ವರಿಗೂ ಧನ್ಯವಾದ ಅರ್ಪಣೆ ಮಾಡಿದ ರಾಜೇಗೌಡ ದಂಪತಿ
NAMMUR EXPRESS NEWS
ಶೃಂಗೇರಿ ಶಾಸಕರು ಹಾಗೂ ಕೆಆರ್‌ಇಡಿಎಲ್ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ ಹಾಗೂ ಪುಷ್ಪ ಅವರ ಸುಪುತ್ರನಾದ ರಾಜ್‌ದೇವ್ ಟಿ.ಆರ್ ಅವರ ವಿವಾಹ ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ವಧು-ವರರಿಗೆ ರಾಜ್ಯದ ಉಪ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ರಾಜಕೀಯ, ಧಾರ್ಮಿಕ, ಸಿನಿಮಾ,ಉದ್ಯಮ, ಸಾಮಾಜಿಕ ಕ್ಷೇತ್ರದ ಗಣ್ಯರು, ಶೃಂಗೇರಿ ಕ್ಷೇತ್ರದ ಎಲ್ಲಾ ಪ್ರಮುಖರು, ಕಾರ್ಯಕರ್ತರು, ಜನತೆ ಭಾಗವಹಿಸಿ ಶುಭ ಹಾರೈಸಿದರು. ಬೆಂಗಳೂರು ಹಾಗೂ ಚಿಕ್ಕಮಗಳೂರಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಶುಭ ಸಂದರ್ಭದಲ್ಲಿ ಭಾಗಿಯಾದ ಎಲ್ಲರಿಗೂ ರಾಜೇಗೌಡ ದಂಪತಿಗಳು ಧನ್ಯವಾದಗಳನ್ನು ಹೇಳಿದ್ದಾರೆ.
ನೂತನ ದಂಪತಿಗಳಿಗೆ ಶುಭಾಶಯಗಳು
ಶ್ರೀಮತಿ ಡಿ.ಕೆ.ಪುಷ್ಪ ರಾಜೇಗೌಡ ಮತ್ತು ಶ್ರಿ ಟಿ.ಡಿ.ರಾಜೇಗೌಡ ಅವರ ಸುಪುತ್ರ ರಾಜ್‌ದೇವ್ ಟಿ.ಆರ್ ಮತ್ತು ಅನಂದಿತ ರೆಡ್ಡಿ ಎಂ.ಎ. ಅವರ ದಾಂಪತ್ಯ ಜೀವನವು ಸಿಹಿಯಿಂದ ಕೂಡಿರಲಿ. ದಾಂಪತ್ಯ ಜೀವಕ್ಕೆ ಕಾಲಿಟ್ಟ ತಮಗೆ ಶುಭಾಶಯಗಳು.
ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರ್ನಾಟಕ
