Categories
ಡೆಲ್ಲಿ

ಕ್ಯಾನ್ಸರ್ ರೋಗಿಗಳಿಗೆ ಕೊನೆಗೂ ಗುಡ್ ನ್ಯೂಸ್..!!

ಕ್ಯಾನ್ಸರ್ ರೋಗಿಗಳಿಗೆ ಕೊನೆಗೂ ಗುಡ್ ನ್ಯೂಸ್..!!
– ಎಲ್ಲಾ ರೀತಿ ಕ್ಯಾನ್ಸರ್‌ಗೆ ದಿವ್ಯ ಔಷಧಿ ರೆಡಿ.!
– ಕೋವಿಡ್ ಲಸಿಕೆ ತಂತ್ರಜ್ಞಾನ ಬಳಸಿದ ವ್ಯಾಕ್ಸಿನ್ ಪರೀಕ್ಷೆ

NAMMUR EXPRESS NEWS
ನವದೆಹಲಿ: ಕ್ಯಾನ್ಸರ್‌ಗೆ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಫ್ಲೋರಿಡಾ ವಿವಿಯು ಮಹತ್ವದ ಸಂಶೋಧನೆಯನ್ನು ನಡೆಸಿದೆ. ಇದು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ಯಾನ್ಸ‌ರ್ ಗೂ ದಿವ್ಯ ಔಷಧಿ ಆಗಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಇದುವರೆಗೂ ಎಲ್ಲಾ ರೀತಿಯ ಸಂಶೋಧನೆಗಳು ಕ್ಯಾನ್ಸರ್ ಗಡ್ಡೆಯನ್ನು ನಾಶ ಮಾಡುವ ಉದ್ದೇಶದೊಂದಿಗೆ ನಡೆಸಲಾಗುತ್ತಿತ್ತು. ಆದರೆ ಫ್ಲೋರಿಡಾ ವಿವಿಯ ವಿಜ್ಞಾನಿಗಳ ತಂಡ ನೇರವಾಗಿ ಟ್ಯೂಮ‌ರ್ ನಿಯಂತ್ರಣದ ಬದಲಾಗಿ ಟ್ಯೂಮರ್ ವಿರುದ್ಧ ದೇಹದಲ್ಲಿ ಪ್ರತಿಕಾಯಶಕ್ತಿಯನ್ನು ಪ್ರಚೋದಿಸುವ ಮತ್ತು ಟ್ಯೂಮರ್ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಉತ್ತೇಜಿಸುವ ಆಧಾರದಲ್ಲಿ ಸಂಶೋಧನೆ ನಡೆಸಿದೆ.

ಕೋವಿಡ್ ಲಸಿಕೆಯಲ್ಲಿ ಬಳಸಲಾದ ಎಂಆರ್ ಎನ್‌ಎ ಪದ್ಧತಿ ಆಧರಿಸಿ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಈ ವೇಳೆ ಅದು ಕ್ಯಾನ್ಸರ್ ಟ್ಯೂಮರ್ ವಿರುದ್ಧ ದೇಹದ ಪ್ರತಿಕಾಯಗಳು ಹೋರಾಡಲು ಪ್ರಚೋದಿಸಿದ್ದು, ಟ್ಯೂಮ‌ರ್ ಗುಣಪಡಿಸಿದ್ದು ಕಂಡುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.