ಕಿಗ್ಗಾ ಸಮೀಪ ಭೀಕರ ರಸ್ತೆ ಅಪಘಾತ,ವಿದ್ಯಾರ್ಥಿನಿ ಸಾವು
* ಕಾರ್‌ಗೆ ಹಿಂದಿನಿಂದ ಗುದ್ದಿದ ಬೈಕ್,ರಸ್ತೆಗೆ ಬಿದ್ದ ವಿದ್ಯಾರ್ಥಿನಿ
* ತಂಗಿಯನ್ನು ಹಾಸ್ಟೆಲ್‌ಗೆ ಬಿಡಲು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಸಹೋದರ
NAMMMUR EXPRESS NEWS
ಶೃಂಗೇರಿ: ತಾಲೂಕಿನ ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂಡಘಟ್ಟ ಗಣಪತಿಕಟ್ಟೆ ಮಧ್ಯೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕಾಲೇಜು ಪ್ರಾರಂಭ ಹಿನ್ನೆಲೆ ತನ್ನ ತಂಗಿಯನ್ನು ಹಾಸ್ಟೆಲ್‌ಗೆ ಬಿಡುವ ಸಲುವಾಗಿ ಬೈಕ್‌ನಲ್ಲಿ ಸಹೋದರ ಕರೆದುಕೊಂಡು ಹೋಗುವಾಗ ಬೈಕ್ ಕಾರ್‌ವೊಂದಕ್ಕೆ ಹಿಂದಿನಿಂದ ಗುದ್ದಿದೆ ಈ ಸಂದರ್ಭ ಬೈಕ್ ಸವಾರ ಧಿಡೀರ್ ಬ್ರೇಕ್ ಹೊಡೆದಿದ್ದಾನೆ,ಪರಿಣಾಮ ಬೈಕ್‌ನ ಹಿಂದೆ ಕೂತಿದ್ದ ವಿದ್ಯಾರ್ಥಿನಿ ರಕ್ಷಿತಾ(17) ಚಿಮ್ಮಿ ರಸ್ತೆಗೆ ಬಿದ್ದಿದ್ದಾಳೆ. ರಸ್ತೆಗೆ ಬಿದ್ದ ರಕ್ಷಿತಾಗೆ ಗಂಭೀರ ಗಾಯವಾಗಿ ರಕ್ತ ಸುರಿದಿದೆ.ತಕ್ಷಣ ಆಸ್ಪತ್ರೆ ಕರೆದುಕೊಂಡು ಹೋದರಾದರೂ ವಿದ್ಯಾರ್ಥಿನಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿತ್ತಲುಮನೆಕೊಡಿಗೆ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ತಪ್ಪೂ ಮಾಡದೆ,ಓದಿ ಕೆಲಸ ಸೇರಿ ಬದುಕಿ ಬಾಳ ಬೇಕಾದ ಯುವತಿಯ ಈ ಸಾವು ಸ್ಥಳೀಯರಲ್ಲಿ ತೀವ್ರ ಬೇಸರವನ್ನುಂಟುಮಾಡಿದೆ.