ಟಾಪ್ 2 ನ್ಯೂಸ್
ಗೃಹ ಸಚಿವರ ಊರಲ್ಲೇ ಭೀಕರ ಕೊಲೆ..!!
– ಶವ ತುಂಡು ಮಾಡಿ ರಸ್ತೆಯ ಅಲ್ಲಲ್ಲಿ ಕಸದಂತೆ ಎಸೆದು ಹೋದ ಹಂತಕರು..!
– ಸುಧಾಕರ್ ಹೆಸರು ಬರೆದಿಟ್ಟು ಜಿ.ಪಂ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಆತ್ಮಹತ್ಯೆ..!!
NAMMUR EXPRESS NEWS
ತುಮಕೂರು : ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಜಿಲ್ಲೆಯಲ್ಲೇ ಭೀಕರ ಕೊಲೆ ಬೆಳಕಿಗೆ ಬಂದಿದೆ. ಕೊಲೆ ಭೀಕರವಾಗಿ ನಡೆದಿದ್ದು, ಅದಕ್ಕಿಂತಲೂ ಹೆಚ್ಚಾಗಿ ಶವವನ್ನು ಪೊಲೀಸರು ಪತ್ತೆ ಮಾಡಿರುವ ರೀತಿಯೇ ಹಂತಕನ ಅಮಾನುಷ ವರ್ತನೆಗೆ ಸಾಕ್ಷಿಯಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಿರುವ ಹಂತಕ ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಲ್ಲದೆ, ಅದನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ರಸ್ತೆಯ ಅಲ್ಲಲ್ಲಿ ಕಸದಂತೆ ಎಸೆದು ಹೋಗಿರುವ ಘಟನೆ ನಡೆದಿದೆ.
ಅಪರಿಚಿತ ಶವದ ತುಂಡುಗಳು ತುಮಕೂರಿನಲ್ಲಿ ಆತಂಕ ಸೃಷ್ಟಿಸಿದೆ. ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ಕವರ್ ಗಳಲ್ಲಿ ಶವದ ಭಾಗಗಳು ಪತ್ತೆಯಾಗಿವೆ. 3 ಕಿಲೋಮೀಟರ್ ಅಂತರದಲ್ಲಿ ಐದು ಕಡೆ ಶವದ ಕವರ್‌ಗಳು ಪತ್ತೆಯಾಗಿದೆ. ಮೃತದೇಹ ಪುರುಷರದ್ದೋ..? ಮಹಿಳೆಯದ್ದೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ವಕ್ಷೇತ್ರದಲ್ಲಿ ತುಂಡು ತುಂಡಾದ ದೇಹ ಪತ್ತೆಯಾಗಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಮುತ್ಯಾಲಮ್ಮ ದೇವಾಲಯದ ಬಳಿಯ ರಸ್ತೆಯಲ್ಲಿ ಮೃತದೇಹದ ಭಾಗಗಳು ಪತ್ತೆಯಾಗಿವೆ. ಗರುಡಚಲ ನದಿಯಿಂದ ಲಿಂಗಾಪುರದ ವರೆಗೂ ಐದು ಕಡೆ ಶವದ ತುಂಡುಗಳಿರುವ ಕವರ್ ಪತ್ತೆಯಾಗಿದೆ. ಶವದ ಭಾಗಗಳು ಪತ್ತೆಯಾದ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಆಗಮಿಸಿದ್ದಾರೆ. ಕೋಳಾಲ, ಕೊರಟಗೆರೆ, ಗೌರಿಬಿದನೂರು ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಹದ ತುಂಡುಗಳನ್ನು ಹಂತಕ ಎಸೆದು ಹೋಗಿದ್ದಾನೆ. ಕೈ, ಕಾಲು, ಕರಳು ಒಂದೊಂದು ಅಂಗಗಳನ್ನು ಪ್ರತ್ಯೇಕವಾಗಿ ಪತ್ತೆ ಮಾಡಲಾಗಿದೆ.
– ಚಿಕ್ಕಬಳ್ಳಾಪುರ: ಸುಧಾಕರ್ ಹೆಸರು ಬರೆದಿಟ್ಟು ಜಿ.ಪಂ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಆತ್ಮಹತ್ಯೆ..!!
ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಅವರ ಕಾರು ಚಾಲಕ ಬಾಬು (33) ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಬು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಸಂಸದ ಡಾ.ಕೆ.ಸುಧಾಕರ್, ಅವರ ಬೆಂಬಲಿಗರಾದ ನಾಗೇಶ್ ಎನ್. ಮತ್ತು ಮಂಜುನಾಥ್ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಸುಧಾಕರ್ ಸಚಿವರಾಗಿದ್ದ ವೇಳೆ ಅವರ ಬೆಂಬಲಿಗರಾದ ನಾಗೇಶ್ ಮತ್ತು ಮಂಜುನಾಥ್ ಕಾಯಂ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದಿದ್ದರು. ₹40 ಲಕ್ಷ ನೀಡಬೇಕು ಎಂದಿದ್ದರು. ನಾನು ನನ್ನ ಬಳಿ ಇದ್ದ ಹಣದ ಜೊತೆಗೆ ಸಾಲ ಮಾಡಿ ₹25 ಲಕ್ಷ ನೀಡಿದ್ದೆ. ಆದರೆ ಕೆಲಸ ಮಾತ್ರ ಕೊಡಿಸಲಿಲ್ಲ’ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.