Categories
ಬೆಂಗಳೂರು

ಕಾಡಾನೆ ಉಪಟಳ ತಕ್ಷಣ ಸಮಸ್ಯೆ ಬಗೆಹರಿಸಲು ಡಾ.ಆರತಿಕೃಷ್ಣ ಮನವಿ

ಕಾಡಾನೆ ಉಪಟಳ ತಕ್ಷಣ ಸಮಸ್ಯೆ ಬಗೆಹರಿಸಲು ಡಾ.ಆರತಿಕೃಷ್ಣ ಮನವಿ

* ತಕ್ಷಣ ಸಮಸ್ಯೆ ಬಗೆಹರಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮನವಿ
* ಆನೆ ದಾಳಿಯಿಂದ ಮೃತಪಟ್ಟವರಿಗೆ 25 ಲಕ್ಷ ರೂ.ಗಳ ಪರಿಹಾರ ನೀಡಿ

NAMMMUR EXPRESS NEWS
ಬೆಂಗಳೂರು: ಶೃಂಗೇರಿ ಕ್ಷೇತ್ರದಾದ್ಯಂತ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದು, ಒಂದು ವಾರದಲ್ಲಿ ಇಬ್ಬರ ಸಾವಿಗೆ ಕೂಡ ಕಾರಣವಾಗಿವೆ. ತಕ್ಷಣ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಸಲ್ಲಿಸಿದ್ದಾರೆ.
ಆನೆ ದಾಳಿಯಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದ ಬೇರೆ ಭಾಗದಲ್ಲಿ ಸೆರೆ ಹಿಡಿಯಲಾದ ಆನೆಗಳನ್ನು ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿ ತಂದು ಬಿಡಲಾಗುತ್ತದೆ ಎಂಬ ಭಾವನೆ ಮೂಡಿದೆ. ಕಾಡಿನ ನಡುವೆ ವಾಸಿಸುವ ನಾಗರೀಕರಿಗೆ ಆನೆಗಳಿಂದ ಅಪಾಯ ಎದುರಾಗುತ್ತಿದೆ. ಸೆರೆ ಹಿಡಿಯುವ ಆನೆಗಳನ್ನು ಅರಣ್ಯ ಪ್ರದೇಶದಲ್ಲಿ ಲಭ್ಯವಿರುವ ಬೃಹತ್ ಜಾಗವನ್ನು ಗುರುತಿಸಿ ಸುತ್ತ ರೈಲ್ವೇ ಬ್ಯಾರಿಕೇಡ್ ನಿರ್ಮಿಸಿ ಅಲ್ಲಿ ಬಿಡುವುದು ಸೂಕ್ತ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಮೀನುಗಳಿಗೆ ದಾಳಿ ತಪ್ಪಿಸಲು ಅರಣ್ಯ ಪ್ರದೇಶದಲ್ಲಿ ಫಲ ನೀಡುವ ಹಲಸು, ಮಾವು ಇತರ ಗಿಡಗಳನ್ನು ಬೆಳಸಬೇಕು. ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಕೇರಳದಲ್ಲಿ ನೀಡುವಂತೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಆರತಿಕೃಷ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.