Categories
ರಾಜ್ಯ ರಾಷ್ಟ್ರೀಯ ವಾರ್ತೆ

ಕನ್ನಡಿಗರಿಗೆ ಮತ್ತೊಂದು ಹೆಮ್ಮೆ..!

ಕನ್ನಡಿಗರಿಗೆ ಮತ್ತೊಂದು ಹೆಮ್ಮೆ..!
– ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ‘ಹೊಯ್ಸಳ ದೇಗುಲ’ ಸಮೂಹ
– ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣ

NAMMUR EXPRESS NEWS
ನವದೆಹಲಿ: ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಸಂಗತಿ ದೊರಕಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳ ಸಮೂಹಗಳನ್ನ ಸೇರಿಸಲಾಗಿದೆ. ರಾಜ್ಯದ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳನ್ನ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಸೇರಿಸಲಾಗಿದ್ದು, ಈ ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣವಾಗಿದೆ. ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನ ಯುನೆಸ್ಕೋದ ಮತ್ತೊಂದು ಪಾರಂಪರಿಕ ತಾಣವಾಗಿ ಸೇರಿಸಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. 10 ಮತ್ತು 14ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಹೊಯ್ಸಳ ಸಾಮ್ರಾಜ್ಯವು ಭಾರತದ ದಕ್ಷಿಣ ಪ್ರದೇಶದಲ್ಲಿ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ.

ಕರ್ನಾಟಕವು ಈಗಾಗಲೇ ಹಂಪಿ ಅವಶೇಷಗಳು, ಪಟ್ಟದಕಲ್ಲು ಸ್ಮಾರಕಗಳು ಮತ್ತು ಪಶ್ಚಿಮ ಘಟ್ಟಗಳಂತಹ ಹಲವಾರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ ಶಾಂತಿನಿಕೇತನದ ಸೇರ್ಪಡೆಯೂ ಈ ಪಟ್ಟಿಗೆ ಸೇರಿದೆ. ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳು ಮತ್ತು ಶಾಂತಿನಿಕೇತನವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದು ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಸಂಪತ್ತಿನ ಭಂಡಾರವಾಗಿ ಭಾರತದ ಪರಂಪರೆಯನ್ನ ನೆನಪಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.