Categories
ತೀರ್ಥಹಳ್ಳಿ

ತೀರ್ಥಹಳ್ಳಿಗೂ ಬಂದರು ಬೈಕ್ ಕಳ್ಳರು!

ತೀರ್ಥಹಳ್ಳಿಗೂ ಬಂದರು ಬೈಕ್ ಕಳ್ಳರು!
– ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ ಕಳವು
– ಪಟ್ಟಣದಲ್ಲಿ ಹಲವೆಡೆ ಬೇಕು ಸಿಸಿಟಿವಿ
– ಹೊರಗಿನವರ ಮೇಲೆ ಇಡಬೇಕು ಕಣ್ಣು..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸರು ಇತ್ತೀಚಿಗೆ ಅನೇಕ ಪ್ರಕರಣದಲ್ಲಿ ಕಳ್ಳರನ್ನು ಹೆಡೆಮುರಿ ಕಟ್ಟುತ್ತಿರುವ ನಡುವೆ ಇದೀಗ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಹಳೆಯ ಕೋರ್ಟ್ ಕಚೇರಿ ಮುಂಭಾಗದಲ್ಲಿ ಬೈಕ್ ಒಂದನ್ನು ಕಳ್ಳರು ಕದ್ದಿದ್ದಾರೆ.
ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂಬ ಶಿಕ್ಷಕರು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಅವರ KA 14 R-3065 ನಂಬರಿನ ಹೀರೋ ಹೋಂಡಾ ಸ್ಪೆಂಡರ್ ಬೈಕ್ ಅನ್ನು ಹ್ಯಾಂಡ್ ಲಾಕ್ ಮಾಡಿದರೂ ಕಳ್ಳರು ಕದ್ದಿದ್ದಾರೆ. ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತೀರ್ಥಹಳ್ಳಿ ಪಟ್ಟಣದಲ್ಲಿ ಸಿಸಿಟಿವಿ ಬೇಕು!

ತೀರ್ಥಹಳ್ಳಿ ಪಟ್ಟಣದಲ್ಲಿ ಹಲವು ಕಡೆ ಸಿಸಿಟಿವಿ ಇಲ್ಲದಿರುವುದೇ ಈ ಘಟನೆಗೆ ಕಾರಣ. ತಾಲೂಕು ಆಡಳಿತ, ಪಟ್ಟಣ ಆಡಳಿತ, ಪೊಲೀಸ್ ಇಲಾಖೆ ಎಲ್ಲಾ ಕಡೆ ಸಿಸಿಟಿವಿ ಜೋಡಿಸಬೇಕಿದೆ.

ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿದ್ರೆ ಮಾಯ!

ತೀರ್ಥಹಳ್ಳಿ ಪಟ್ಟಣದ ಹೊರ ವಲಯದಲ್ಲಿ ಇತ್ತೀಚಿಗೆ ಕಾರು ಕಳ್ಳತನ ಯತ್ನ ನಡೆದಿತ್ತು. ಇದೀಗ ಬೈಕ್ ಕಳ್ಳತನ ಮಾಡಲಾಗಿದೆ. ಆದ್ದರಿಂದ ವಾಹನ ಮಾಲೀಕರು ಬೈಕ್ ಅಥವಾ ಕಾರು ನಿಲ್ಲಿಸುವಾಗ ಎಚ್ಚರ ವಹಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.