Categories
ರಾಜ್ಯ

ಅಯೋಧ್ಯೆ ಸಂಭ್ರಮ

ಅಯೋಧ್ಯೆ ಸಂಭ್ರಮ
– ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧವಾದ ಭಾರತ!
– ಎಲ್ಲೆಲ್ಲೂ ಸಂಭ್ರಮ, ಪೂಜೆ, ದೀಪಾಲಂಕಾರ!
– ಅಯೋಧ್ಯೆ ರಾಮನ ಸ್ವಾಗತಕ್ಕೆ ಸಜ್ಜು!

NAMMUR EXPRESS NEWS
ನವದೆಹಲಿ: ಇಡೀ ದೇಶವೇ ಸಂಭ್ರಮದಿಂದ ಕಾಯುತ್ತಿರುವ ಶ್ರೀರಾಮನ ಪ್ರತಿಷ್ಠಾಪನೆಗೆ ಒಂದೇ ದಿನ ಉಳಿದಿದ್ದು ಭಾರತದಾದ್ಯಂತ ರಾಮನ ಸ್ವಾಗತಕ್ಕೆ ತಯಾರಿ ನಡೆಯುತ್ತಿದೆ. ದೇಶದ ಎಲ್ಲಾ ದೇವಸ್ಥಾನಗಳು ಸ್ವಚ್ಛವಾದ ಆವರಣದೊಳಗೆ, ಹೂವು ಹಾರ, ದೀಪಾಲಂಕಾರಗಳೊಂದಿಗೆ ಶ್ರೀರಾಮನ ಸ್ವಾಗತಕ್ಕೆ ಸಿದ್ಧವಾಗಿ ಕ್ಷಣಗಣನೆ ಶುರುವಾಗಿದೆ. ಅಯೋಧ್ಯೆಯನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದಾಗಿವೆ.

ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನಾ ದಿನ ದೇವಸ್ಥಾನವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ಅದೇ ರೀತಿ ದೀಪಾಲಂಕಾರದ ಮೂಲಕವೂ ದೇಗುಲದ ಸೌಂದರ್ಯವನ್ನು ನೂರ್ಮಡಿಗೊಳಿಸಲಾಗಿದೆ. ಶತಕೋಟಿ ಭಾರತೀಯರ ಕನಸಾಗಿರುವ ಈ ರಾಮ ಮಂದಿರ ಉದ್ಘಾಟನೆ ವೇಳೆ ಹೇಗೆ ಸಿಂಗಾರಗೊಂಡಿರಬಹುದು ಎಂಬ ಕೌತುಕವನ್ನು ತಣಿಸಲು ರಾಮಮಂದಿರ ಟ್ರಸ್ಟ್​​ನವರು ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.