ತೀರ್ಥಹಳ್ಳಿಯಲ್ಲಿ ಮತ್ತೊಬ್ಬಳ ಆತ್ಮಹತ್ಯೆ!
– ಮದುವೆ ನಿಶ್ಚಯವಾಗಿದ್ದ ಹುಡುಗಿ ಮನೆಯಲ್ಲೇ ನೇಣಿಗೆ
– ತೀರ್ಥಹಳ್ಳಿ ತಾಲೂಕಲ್ಲಿ ಈ ತಿಂಗಳು 20 ಆತ್ಮಹತ್ಯೆ?!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮತ್ತೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲಿನಲ್ಲಿ ಮದುವೆ ನಿಶ್ಚಯವಾಗಿದ್ದ ಚೈತ್ರಾ (27) ಮನೆಯ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ. ಮನೆಯಲ್ಲಿ ತೀವ್ರ ಬಡತನ ಇದ್ದು ಕಟ್ಟೆಹಕ್ಕಲು ಮೆಡಿಕಲ್ ಶಾಪ್ ಅಲ್ಲಿ ಕೆಲಸ ಮಾಡುತ್ತಿದ್ದಳು. ಜಯಮ್ಮ ಮತ್ತು ಗಣೇಶ್ ಅವರ ಪುತ್ರಿ. ಭಾನುವಾರ ಬೆಳಿಗ್ಗೆ ಮನೆಯ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾಳೆ.
ತೀರ್ಥಹಳ್ಳಿಯಲ್ಲಿ ಈ ತಿಂಗಳು 20ಕ್ಕೂ ಹೆಚ್ಚು ಸುಸೈಡ್!
ತೀರ್ಥಹಳ್ಳಿ ಠಾಣೆಯಲ್ಲಿ 8 ಪ್ರಕರಣ, ಮಾಳೂರು, ಕೋಣಂದೂರು, ಆಗುಂಬೆ, ರಿಪ್ಪನಪೇಟೆ ಸೇರಿ 20 ಆತ್ಮಹತ್ಯೆ ಮಾಡಿಕೊಂಡಿದ್ದಾರೆ.