Categories
ರಾಜ್ಯ

ಸತತ ನಾಲ್ಕು ದಿನಗಳು ಬ್ಯಾಂಕ್ ಬಂದ್..!!

ಸತತ ನಾಲ್ಕು ದಿನಗಳು ಬ್ಯಾಂಕ್ ಬಂದ್..!!
– ಮಾರ್ಚ್ 24, 25ಕ್ಕೆ ಸರ್ಕಾರಿ ಬ್ಯಾಂಕ್ ಮುಷ್ಕರ
– ಬ್ಯಾಂಕ್ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

NAMMUR EXPRESS NEWS
ನವದೆಹಲಿ : ಮುಂದಿನ ವಾರ ಎರಡು ದಿನ ಸರ್ಕಾರಿ ಬ್ಯಾಂಕ್ ಉದ್ಯೋಗಿಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಮಾರ್ಚ್ 24 ಮತ್ತು 25ರಂದು ಮುಷ್ಕರ ನಡೆಯುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ಬ್ಯಾಂಕುಗಳ ಸಂಘಟನೆಯಾದ ಐಬಿಎ ಜೊತೆ ನಡೆದ ಮಾತುಕತೆಯಲ್ಲಿ ಯಾವುದೇ ಭರವಸೆ ಮೂಡದ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್​​ಗಳ ಸಂಯುಕ್ತ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರದ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎಸ್​​ಬಿಐ, ಕರ್ಣಾಟಕ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ಯಾದಿ ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳು ಮಾತ್ರವೇ ಮುಷ್ಕರದಲ್ಲಿ ಭಾಗಿಯಾಗಿರುತ್ತಾರೆ.

ಒಂಬತ್ತು ಸರ್ಕಾರಿ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳು ಸೇರಿ ರಚಿಸಲಾಗಿರುವ ಯುನೈಟೆಡ್ ಫೋರಂ ತಮ್ಮ ಮುಷ್ಕರದ ನಿರ್ಧಾರ ಹಿಂಪಡೆಯಲಾಗುವುದಿಲ್ಲ ಎಂದು ಮಾರ್ಚ್ 13ರಂದು ಹೇಳಿತ್ತು. ಐಬಿಎ ಜೊತೆ ಅದು ಎರಡು ದಿನ ಮಾತುಕತೆ ನಡೆಸಿತ್ತು. ಆದರೆ, ಬ್ಯಾಂಕ್ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಗುವ ಯಾವ ಭರವಸೆಯೂ ಮಾತುಕತೆಯಲ್ಲಿ ಬರಲಿಲ್ಲ ಎಂದು ಬ್ಯಾಂಕ್ ಯೂನಿಯನ್​​ಗಳ ಮಹಾ ಒಕ್ಕೂಟವು ಹೇಳಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.