Categories
ರಾಜ್ಯ

ಬೆಂಗಳೂರು : ಲಾರಿ ರಿವರ್ಸ್ ತೆಗೆಯುವಾಗ ವಿದ್ಯುತ್ ತಂತಿ ತಗುಲಿ ಚಾಲಕ ಸಾವು..!!

ಟಾಪ್ 4 ನ್ಯೂಸ್ ಕರ್ನಾಟಕ

ಬೆಂಗಳೂರು : ಲಾರಿ ರಿವರ್ಸ್ ತೆಗೆಯುವಾಗ ವಿದ್ಯುತ್ ತಂತಿ ತಗುಲಿ ಚಾಲಕ ಸಾವು..!!
– ಧಾರವಾಡ: ಗೆಳತಿಯರಿಗಿಂತ ಕಡಿಮೆ ಅಂಕ ಎಂದು ವಿದ್ಯಾರ್ಥಿನಿ ಸೂಸೈಡ್..!!
– ಚಾಮರಾಜನಗರ : ಕೌಟುಂಬಿಕ ಕಲಹದಿಂದ ಬಾವಿಗೆ ಹಾರಿ ತಾಯಿ, ಮಕ್ಕಳ ಸಾವು..!!
– ಮೈಸೂರು: ಕಾರ್ ಟೈರ್ ಸಿಡಿದು ಬೈಕ್‌ಗೆ ಡಿಕ್ಕಿಯಾಗಿ ಯುವಕ ಸಾವು..!!

NAMMUR EXPRESS NEWS
ಬೆಂಗಳೂರು : ಲಾರಿ ಚಲಾಯಿಸುವಾಗ ಟಾಪ್‌ಗೆ ವಿದ್ಯುತ್ ತಂತಿ ಸಿಲುಕಿ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರಪ್ರದೇಶ ಮೂಲದ ಚೋಟಾಕ್ (45) ಮೃತ ಲಾರಿ ಚಾಲಕ. ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಕೆಂಗೇರಿ ಉಪನಗರದ ಸನ್‌ಸಿಟಿ ಸಮೀಪದ ಬಲಮುರಿ ಗಣೇಶ ದೇವಸ್ಥಾನ ಬಳಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೂಲದ ಚೋಟಾಕ್ ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಂಗೇರಿ ಉಪನಗರದ ಸನ್‌ಸಿಟಿ ಅಪಾರ್ಟ್‌ ಮೆಂಟ್ ಬಳಿ ನಿರ್ಮಾಣ ಹಂತದ ಅಪಾರ್ಟ್‌ ಮೆಂಟ್ ಬಳಿ ಲಾರಿಯನ್ನು ಅನ್ ಲೋಡ್ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆಯ ಬದಿಯ ವಿದ್ಯುತ್ ಕಂಬದ ಪಕ್ಕದಲ್ಲಿ ಲಾರಿ ಚಲಾಯಿಸಿದ ಪರಿಣಾಮ ಲಾರಿಯ ಟಾಪ್‌ಗೆ ವಿದ್ಯುತ್ ತಂತಿ ಸಿಲುಕಿದೆ. ಲಾರಿ ಮುಂದಕ್ಕೆ ಚಲಿಸಿದ ಪರಿಣಾಮ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಲಾರಿಯೊಳಗೆ ಚಾಲಕ ಚೋಟಾಕ್ ಮೃತಪಟ್ಟಿದ್ದಾರೆ.

– ಧಾರವಾಡ: ಗೆಳತಿಯರಿಗಿಂತ ಕಡಿಮೆ ಅಂಕ ಎಂದು ವಿದ್ಯಾರ್ಥಿನಿ ಸೂಸೈಡ್..!!

ಧಾರವಾಡ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ನೇಹಿತೆಯರಿಗಿಂತ ಕಡಿಮೆ ಅಂಕ ಪಡೆದಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ನೊಂದು ಹಳ್ಳದ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೀರ್ತಿ ಅಂಗಡಿ (17) ಮೃತ ವಿದ್ಯಾರ್ಥಿನಿ. ಕೀರ್ತಿ ಪಿಯುಸಿಯಲ್ಲಿ ಶೇ.66 ಅಂಕಗಳಿಸಿ ತೇರ್ಗಡೆಯಾಗಿದ್ದಾಳೆ. ಆದರೂ ಸ್ನೇಹಿತರಿಗಿಂತ ಕಡಿಮೆ ಅಂಕ ಬಂದಿದೆ ಎಂದು ನೊಂದು ಗ್ರಾಮದ ಜಮೀನಿನ ಪಕ್ಕದಲ್ಲಿರುವ ಬೇಡ್ತಿ ಹಳ್ಳದ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

– ಚಾಮರಾಜನಗರ : ಕೌಟುಂಬಿಕ ಕಲಹದಿಂದ ಬಾವಿಗೆ ಹಾರಿ ತಾಯಿ, ಮಕ್ಕಳ ಸಾವು..!!

ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಕಾಡು ಹೊಲದಲ್ಲಿ ನಡೆದಿದೆ. ಮಹದೇಶ್ವರ ಬೆಟ್ಟ ಸಮೀಪದ ಕಾಡುಹೊಲದ ಸುಶೀಲ (30) ಚಂದ್ರು, (8) ದಿವ್ಯಾ (11) ಮೃತರು. ಸೋಮವಾರ ಜಮೀನಿನ ಬಾವಿಯಲ್ಲಿ ನೀರನ್ನು ತರಲು ತೆರಳಿದಂತಹ ಮಾಲೀಕನಿಗೆ ಬಾವಿಯ ಬಳಿ ಚಪ್ಪಲಿ, ತಾಳಿ ಹಾಗೂ ಇನ್ನಿತರ ವಸ್ತು ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ಪೊಲೀಸರನ್ನು ಕರೆಸಿ ಪರಿಶೀಲಿಸಿದಾಗ ಮೃತದೇಹ ಕಂಡುಬಂದಿದೆ.

 – ಮೈಸೂರು: ಕಾರ್ ಟೈರ್ ಸಿಡಿದು ಬೈಕ್‌ಗೆ ಡಿಕ್ಕಿಯಾಗಿ ಯುವಕ ಸಾವು..!!

ಮೈಸೂರು: ಐಷಾರಾಮಿ ಜಾಗ್ವಾರ್ ಕಾರ್‌ನ ಮುಂಭಾಗದ ಟಯ‌ರ್ ಸಿಡಿದು ಬೈಕ್‌ಗೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಆತನ ತಾಯಿಯು ನದಿಗೆ ಹಾರಿದ ಘಟನೆ ಮೈಸೂರಿನ ಬನ್ನೂರಿನ ಸಮೀಪ ನಡೆದಿದೆ. ಮೈಸೂರಿನ ಮೇಟಗಳ್ಳಿಯ ಕರಕುಶಲ ನಗರದ ನಿವಾಸಿ ಶಂಕರ್ (21) ಮೃತ. ತಾಯಿ ಪಾರ್ವತಿ ನದಿಗೆ ಹಾರಿದರು. ಮೃತ ಶಂಕರ್‌ಮತ್ತು ಆತನ ತಾಯಿ ಪಾರ್ವತಿ ಟಿ.ನರಸೀಪುರ ತಾಲೂಕಿನಲ್ಲಿ ಮನೆ ದೇವರ ಪೂಜೆ ಮುಗಿಸಿ ವಾಪಸ್ಸಾಗುವಾಗ ಮೈಸೂರಿನಿಂದ ಮಳವಳ್ಳಿ ಮಾರ್ಗವಾಗಿ ಬರುತ್ತಿದ್ದ ಜಾಗ್ವರ್‌ಕಾರ್‌ನ ಮುಂಭಾಗದ ಟಯರ್‌ ಮಧ್ಯಭಾಗದಲ್ಲಿ ಸಿಡಿದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮಹಿಳೆಗಾಗಿ ನದಿಯಲ್ಲಿ ಶೋಧ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.