ಕನ್ನಡ ಚಿತ್ರ ರಂಗದಲ್ಲಿ ವೀರ ಚಂದ್ರಹಾಸ ಅಬ್ಬರ!!
– ಏ. 18ರಂದು ರಾಜ್ಯದಲ್ಲಿ ತೆರೆಗೆ: ಭಾರೀ ನಿರೀಕ್ಷೆ
– ರವಿ ಬಸ್ರೂರು ತಂಡದ ಸಿನಿಮಾಕ್ಕೆ ಭಾರೀ ಮೆಚ್ಚುಗೆ
– 500 ಯಕ್ಷಗಾನ ಕಲಾವಿದರಿಂದ ನಟನೆ
NAMMUR EXPRESS NEWS
ಇದೇ ಮೊದಲ ಬಾರಿಗೆ ಯಕ್ಷಗಾನದ ಕಥೆಯನ್ನು ಇಟ್ಟುಕೊಂಡು ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ರವಿ ಬಸ್ರೂರು ನಿರ್ದೇಶನದ ಈ ಸಿನಿಮಾದಲ್ಲಿ ನಿಜವಾದ ಯಕ್ಷಗಾನ ಕಲಾವಿದರು ನಟಿಸಿದ್ದಾರೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಪ್ರಿಲ್ 18ರಂದು ಈ ಸಿನಿಮಾ ತೆರೆಕಾಣಲಿದೆ.
ಖ್ಯಾತ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಅವರು ಸಿನಿಮಾ ನಿರ್ದೇಶನದಲ್ಲೂ ಆಸಕ್ತಿ ಹೊಂದಿದ್ದಾರೆ. ಈಗ ಅವರು ‘ವೀರ ಚಂದ್ರಹಾಸ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾ ಏಪ್ರಿಲ್ 18ರಂದು ಬಿಡುಗಡೆ ಆಗಲಿದೆ. ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿರಿಮೆಯನ್ನು ಜಗತ್ತಿಗೆ ಹೇಳಲು ಈ ಸಿನಿಮಾ ಮಾಡಿದ್ದಾರೆ. ಯಕ್ಷಗಾನ ಪ್ರಸಂಗ ಆಧಾರಿತವಾಗಿ ‘ವೀರ ಚಂದ್ರಹಾಸ’ ಸಿನಿಮಾ ಮೂಡಿಬಂದಿದೆ. ಎನ್.ಎಸ್. ರಾಜ್ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ಎಲ್ಲ ಪಾತ್ರಗಳನ್ನು ನಿಜವಾದ ಯಕ್ಷಗಾನ ಕಲಾವಿದರೇ ಮಾಡಿರುವುದು ವಿಶೇಷ. ಅಂದಾಜು 500 ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕಾಗಿ 600ರಿಂದ 700 ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದಾರೆ ಎಂದು ರವಿ ಬಸ್ರೂರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯನ್ನು ರವಿ ಬಸ್ರೂರು ಅವರು ತೆರೆಮೇಲೆ ತೋರಿಸುತ್ತಿದ್ದಾರೆ. ಈ ಸಿನಿಮಾವನ್ನು ಶಕ್ತಿಯಿಂದ ಮಾಡಿಲ್ಲ, ಭಕ್ತಿಯಿಂದ ಮಾಡಿದ್ದೇವೆ’ ಎಂದು ಚಿತ್ರತಂಡದವರಾದ ನಾಗರಾಜ್ ನೈಕಂಬ್ಳಿ ಹೇಳಿಕೊಂಡಿದ್ದಾರೆ.
