ಲವ್ವರ್ ಕೈ ಕೊಟ್ಟಿದ್ದಕ್ಕೆ ಬಾಂಬ್ ಬೆದರಿಕೆ!
– ಕರಾವಳಿಗೆ ಬಾಂಬ್ ಬೆದರಿಕೆ ಹಾಕಿದ್ದು ಹುಡುಗಿ ಅರೆಸ್ಟ್
– ಕಾರಣ ಕೇಳಿ ಬೆಚ್ಚಿ ಬಿದ್ದ ಪೊಲೀಸರು.. ನೀವೂ ಓದಲೇಬೇಕು..!
ನಮ್ಮೂರ್ ಎಕ್ಸ್‌ಪ್ರೆಸ್ ನ್ಯೂಸ್
ಬೆಂಗಳೂರು: ಉಡುಪಿ ಬೆಂಗಳೂರು ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ತಮಿಳುನಾಡು ಮೂಲದ ಯುವತಿ ರೀನಾ ಜೋಶಿಲ್ಲಾ ಕೊನೆಗೂ ಪೊಲೀಸರ ವಶವಾಗಿದ್ದಾಳೆ. ಅಚ್ಚರಿ ಎಂದರೆ ಇದಕ್ಕೆ ಕಾರಣ ಈಕೆಯ ಲವ್ ಫೇಲ್ಯೂರ್..!.
ಗುಜರಾತಿನ ಅಹಮದಾಬಾದ್ ಪೊಲೀಸರ ಸತತ ಕಾರ್ಯಾಚರಣೆಯ ಫಲವಾಗಿ ರೀನಾ ಕೊನೆಗೂ ಸೆರೆವಾಸ ಅನುಭವಿಸುವಂತಾಗಿದೆ. ಈ ರೀತಿ ಮಾಡಲು ಆಕೆ ನೀಡಿದ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ.
ಯಾರಿವಳು… ಏಕೆ ಇಲ್ಲಿದೆ ಡೀಟೇಲ್ಸ್!
ಚೆನ್ನೈ ನ ಎಂಎನ್ ಸಿ ಕಂಪನಿಯಾದ ಡೆಲಾಯಿಟ್ ನಲ್ಲಿ ಉದ್ಯೋಗಿಯಾಗಿರುವ ರೀನಾ ಜೋಶಿಲ್ಲ ತನ್ನ ಸಹೋದ್ಯೋಗಿ ದಿವಿಜ್ ಪ್ರಭಾಕರ್ ಎನ್ನುವವನನ್ನು ಪ್ರೀತಿಸುತ್ತಿದ್ದು, ಆತ ಈಕೆಯ ಪ್ರೀತಿಯನ್ನು ನಿರಾಕರಿಸಿ ಮದುವೆಯಾಗಲು ಒಪ್ಪದ ಕಾರಣ ಮತ್ತು ಆತನೊಂದಿಗೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರೀನಾ ಹಂಚಿಕೊಂಡಿದ್ದನ್ನು ಕಂಡು ಬೇಸತ್ತ ದಿವಿಜ್ ಆಕೆಯ ವಿರುದ್ಧ ದೂರು ನೀಡಿದ್ದ. ಈ ನಡುವೆ ದಿವಿಜ್ ಗೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯವಾಯಿತು. ಇದರಿಂದ ಕುಪಿತಳಾದ ರೀನಾ ತನ್ನ ಸಿಟ್ಟನ್ನು ಹೊರಹಾಕಲು ಕಳೆದ ಫೆಬ್ರವರಿಯಿಂದ ಜೂನ್ ತಿಂಗಳವರೆಗೆ ಈ ರೀತಿ ಹನ್ನೆರಡು ರಾಜ್ಯಗಳ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ ಎನ್ನಲಾಗಿದೆ. ಮತ್ತು ಅಹಮದಾಬಾದ್ ನ ವಿಮಾನ ದುರಂತ ಸಂಭವಿಸಲು ನಾನೇ ಕಾರಣ ಎಂದೂ ಸಹ ಬರೆದುಕೊಂಡಿದ್ದಳು. ಈಕೆಯ ವರ್ತನೆ ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.