ಇನ್ನು ಮುಂದೆ ಎಲ್ಲಾ ಚಿತ್ರಮಂದಿರಕ್ಕೂ ಒಂದೇ ಟಿಕೆಟ್ ದರ!
* ಏಕರೂಪದ ಟಿಕೆಟ್ ದರ ನಿಗಡಿಪಡಿಸಿದ ಸರ್ಕಾರ
* 200 ರೂಪಾಯಿಗಳಿಗೆ ಮೀರದಂತೆ ಚಿತ್ರಮಂದಿರಗಳಲ್ಲಿ ಟಿಕೆಟ್
NAMMUR EXPRESS NEWS
ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರರಂಗದಲ್ಲಿ ಅನುಭವ ಹೊಂದಿರುವ ಇತರ ವ್ಯಕ್ತಿಗಳು ಹಾಗೂ ಚಿತ್ರರಸಿಕರು ಒತ್ತಡ ಹೇರಿದುದರ ಪರಿಣಾಮವಾಗಿ, ರಾಜ್ಯ ಸರ್ಕಾರವು ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಏಕರೂಪದಲ್ಲಿ ಜಾರಿಗೆ ತರಲು ಘೋಷಿಸಿದೆ.
200 ರೂಪಾಯಿಗಳಿಗೆ ಮೀರದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ, ಎಲ್ಲಾ ಭಾಷೆಯ ಚಿತ್ರಗಳಿಗೂ ದರವನ್ನು ಒಂದೇ ರೀತಿ ನಿಗದಿಪಡಿಸಬೇಕು ಎಂಬ ಅಧಿಕೃತ ಆದೇಶವನ್ನು ಸರ್ಕಾರವು ಹೊರಡಿಸಿದೆ. ಇದರಿಂದ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡುವ ಪ್ರಾಮಾಣಿಕ ಪ್ರೇಕ್ಷಕರಿಗೆ ಸಿಹಿ ಸುದ್ಧಿ ದೊರೆತಂತಾಗಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿತ್ತು. ಇದಕ್ಕೆ ಟಿಕೆಟ್ ದರವು ದುಬಾರಿಯಾದುದು ಸಹ ಒಂದು ಕಾರಣವಾಗಿತ್ತು ಎನ್ನಬಹುದು.