Categories
ರಾಜ್ಯ

ಹನಿ ನೀರಿಗೆ ಮುಂದೆ ಕಷ್ಟ ಕಷ್ಟ!

ಹನಿ ನೀರಿಗೆ ಮುಂದೆ ಕಷ್ಟ ಕಷ್ಟ!
– ನೀರನ್ನು ಮಿತವಾಗಿ ಬಳಸಿ..ಪರಿಸರ ಬೆಳೆಸಿ
– ವರ್ಷದಿಂದ ವರ್ಷಕ್ಕೆ ಪ್ರಕೃತಿ ಮುನಿಸು

NAMMUR EXPRESS NEWS
ಮಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರಿಂದ ಅಂತರ್ಜಲ ಕೂಡ ಬತ್ತಿ ಹೋಗುತ್ತಿದೆ. ಕುಡಿಯಲು ನೀರಿಲ್ಲದೇ ಜನರು ಪರದಾಡುವ ಸ್ಥಿತಿ ಬಂದಿದೆ. ಗಿಡ ಮರಗಳು, ಕೃಷಿ ಒಣಗುತ್ತಿದೆ. ಬದುಕು ಬದಲಾಗುತ್ತಿದೆ. ಗಾಳಿ, ನೀರು, ಪ್ರಕೃತಿ ಕೊರತೆಯಾಗುತ್ತಿದೆ. ಮನುಷ್ಯನ ಅತಿಯಾದ ಆಸೆ ಆತನನ್ನೇ ನಿಧಾನಕ್ಕೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಗಾಳಿ, ನೀರನ್ನು ಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿದೆ.

ಪ್ರತಿ ಜೀವಿಗೂ ಬದುಕಲು ನೀರು ಬೇಕು. ಹೀಗಾಗಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ಹಾಗೂ ನೀರು ಪೋಲು ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ. ಈಗ ನಾವು ನೀರನ್ನು ಮಿತವಾಗಿ ಬಳಸದಿದ್ದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈಗಾಗಲೇ ಬೆಂಗಳೂರು ಸೇರಿ ಅನೇಕ ಕಡೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದೈನಂದಿನ ನೀರಿನ ಬಳಕೆ ಮೇಲೆ ಆಡಳಿತಗಳು ನಿರ್ಬಂಧ ಹೇರುತ್ತಿವೆ.

ನಾವೇನು ಮಾಡಬೇಕು?

ಮುಂದಿನ ಪೀಳಿಗೆಗೆ ನೀರಿನ ಅಭಾವ ತಡೆಯಲು ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು, ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು. ಮಿತವಾಗಿ ನೀರು ಬಳಸಬೇಕು ಹಾಗೂ ತ್ಯಾಜ್ಯ ನೀರನ್ನು ಸಂಸ್ಕರಿಸುವ ಮೂಲಕ ಮರುಬಳಕೆ ಮಾಡಬೇಕು. ಪರಿಸರ ಉಳಿಸಬೇಕು. ಪ್ರತಿ ಮನೆಯಲ್ಲೂ ಗಿಡ ಮರ ಬೆಳೆಸಬೇಕು. ಅರಣ್ಯ ಪರಿಸರ ಕಾಪಾಡಬೇಕು. ಆಗ ನೀರಿನ ಕೊರತೆ ತಪ್ಪಿಸಬಹುದು. ಇಲ್ಲದಿದ್ದಲ್ಲಿ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ನಾವೇ ಇಲ್ಲದ ಮೇಲೆ ಭೂಮಿ, ಮನೆ ಅಸ್ತಿ, ಹಣ, ಅಂತಸ್ತು ಇದ್ದರೆಷ್ಟು ಬಿಟ್ಟರೆಷ್ಟು ಅಲ್ಲವೇ..?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.