Categories
ರಾಜ್ಯ

ಎಲ್ ಪಿಜಿ ಸಿಲಿಂಡರ್ ದರ ಇಳಿಕೆ : 58.50 ರೂಪಾಯಿಯಷ್ಟು ಕಡಿಮೆ

ಟಾಪ್ ನ್ಯೂಸ್ ಕರ್ನಾಟಕ

– ಎಲ್ ಪಿಜಿ ಸಿಲಿಂಡರ್ ದರ ಇಳಿಕೆ : 58.50 ರೂಪಾಯಿಯಷ್ಟು ಕಡಿಮೆ
– ಆಟೋದಲ್ಲಿ ನೇಣಿಗೆ ಶರಣು : ಮನನೊಂದ ಪ್ರೇಮಿಗಳ ಆತ್ಮಹತ್ಯೆ
– ನಂದಿನಿ ಹಾಲಿಗೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ತಿಂಗಳು ಪರಿಷ್ಕರಿಸುವ ಹಿನ್ನೆಲೆಯಲ್ಲಿ ಜುಲೈ ತಿಂಗಳ ಮೊದಲ ದಿನದಂದು 19ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 58.50 ರೂಪಾಯಿಯಷ್ಟು ಕಡಿಮೆಗೊಳಿಸುವ ಮೂಲಕ ಜನರಿಗೆ ಸಿಹಿ ಸುದ್ಧಿಯನ್ನು ನೀಡಿದೆ. ಸ್ವತಃ ತೈಲ ಮಾರುಕಟ್ಟೆ ಕಂಪನಿಗಳು ಈ ಸಂಗತಿಯನ್ನು ಬಹಿರಂಗಗೊಳಿಸಿದೆ. ದೆಹಲಿ -1665ರೂಪಾಯಿ, ನೋಯ್ಡಾ – 1747.50ರೂಪಾಯಿ, ಕಲ್ಕತ್ತಾ- 1769 ರೂಪಾಯಿ ,
ಮುಂಬೈ – 1616ರೂಪಾಯಿ, ಚೆನ್ನೈ – 1881 ರೂಪಾಯಿ ಮತ್ತು ಬೆಂಗಳೂರು – 1796 ರೂಪಾಯಿ ಎಂದು ವಿವಿಧ ರಾಜ್ಯಗಳಿಗೆ ವಿವಿಧ ಬೆಲೆಗಳನ್ನು ನಿಗದಿಪಡಿಸಲಾಗಿದೆ.

ಆಟೋದಲ್ಲಿ ನೇಣಿಗೆ ಶರಣು : ಮನನೊಂದ ಪ್ರೇಮಿಗಳ ಆತ್ಮಹತ್ಯೆ

ಬೆಳಗಾವಿ: ಚಿಕ್ಕಗಾತ್ರದ ಆಟೋದಲ್ಲಿ ನೇಣು ಬಿಗಿದುಕೊಳ್ಳುವುದು ಅಸಾಧ್ಯ ಸಂಗತಿ ಎನಿಸಿದರೂ, ಇಂತಹ ಘಟನೆಯೊಂದು ಗೋಕಾಕ್ ತಾಲ್ಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ನಡೆದಿದೆ.‌ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದ ನಿವಾಸಿಗಳಾದ ರಾಘವೇಂದ್ರ ಜಾದವ್ ಮತ್ತು ರಂಜಿತಾ ಚೋಬರಿ ಇಬ್ಬರೂ ಕಳೆದ ಹದಿನೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಇತ್ತೀಚೆಗೆ ರಂಜಿತಾಗೆ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಸಿದ್ದು, ರಂಜಿತಾ ತನ್ನ ಪ್ರಿಯಕರನಾದ ಆಟೋ ಚಾಲಕ ರಾಘವೇಂದ್ರನಲ್ಲಿ ವಿಷಯ ಪ್ರಸ್ತಾಪಿಸಿದಾಗ ಮನನೊಂದ ಇಬ್ಬರೂ ಸಾವನ್ನಪ್ಪಲು ನಿರ್ಧರಿಸಿದ್ದಾರೆ. ರಾಘವೇಂದ್ರ ಓಡಿಸುತ್ತಿದ್ದ ಆಟೋದಲ್ಲಿಯೇ ಇಂದು ಬೆಳಿಗ್ಗೆ ಚಿಕ್ಕನಂದಿ ಗ್ರಾಮದ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿ ಆಟೋ ಹಿಂದಿನ ಸೀಟಿನ ಮೇಲಿನ ಕಬ್ಬಿಣದ ರಾಡ್ ಗೆ ಹಗ್ಗ ಕಟ್ಟಿ, ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಗೋಕಾಕ್ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

* ನಂದಿನಿ ಹಾಲಿಗೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ: 100 ಉತ್ಪನ್ನಗಳಲ್ಲಿ ನಂದಿನಿಗೆ ಮಹತ್ವದ ಸ್ಥಾನ

ಬೆಂಗಳೂರು: ಲಂಡನ್ ಮೂಲದ ಬ್ರ್ಯಾಂಡ್ ಆರ್ಥಿಕ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ನೂರು ಉತ್ಪನ್ನಗಳಲ್ಲಿ ನಂದಿನಿ ಹಾಲು ಮತ್ತು ಅದರ ಉಪ ಉತ್ಪನ್ನಗಳು ಮಹತ್ವದ ಸ್ಥಾನ ಪಡೆದಿದೆ. ಕರ್ನಾಟಕದ ಹೆಮ್ಮೆ ಮತ್ತು ಕನ್ನಡಿಗರ ಅಸ್ಮಿತೆಯ ಕುರುಹುಗಳಲ್ಲಿ ಒಂದಾದ ನಂದಿನಿಯು 1.079 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದುವ ಮೂಲಕ ‘ಬ್ರ್ಯಾಂಡ್ ಫೈನಾನ್ಸ್ 2025’ ರ ಪಟ್ಟಿಯಲ್ಲಿ ಮೂವತ್ತೆಂಟನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತದ ನೂರು ಉತ್ಪನ್ನಗಳಲ್ಲಿ 43ನೇ ಸ್ಥಾನದಲ್ಲಿತ್ತು.‌ ಇನ್ನು ಆಹಾರ ಮತ್ತು ಪಾನೀಯಗಳ ವಿಚಾರದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ನಮ್ಮ ಕರ್ನಾಟಕದ ಉತ್ಪನ್ನ ವಿದೇಶದಲ್ಲಿ ಖ್ಯಾತಿ ಪಡೆದಿರುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಹಾಲು ಉತ್ಪಾದಕ ಸಂಸ್ಥೆಯಾದ ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್ (ಬಮೂಲ್ )ನ ಅಧ್ಯಕ್ಷರಾದ ಡಿ.ಕೆ. ಸುರೇಶ್ ಹೆಮ್ಮೆ ಪಟ್ಟುಕೊಂಡಿದ್ದು, “ಬಮೂಲ್ ನ ಅಧ್ಯಕ್ಷನಾಗಿ ನಂದಿನಿಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಶ್ರಮಿಸುತ್ತೇನೆ” ಎಂಬ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.